ಸಿದ್ದಾಪುರದಲ್ಲಿ ಕ್ರೈಸ್ತರಿಂದ ಪ್ರತಿಭಟನೆ

oplus_0
ಛತ್ತೀಸ್‌ಗಢ ರಾಜ್ಯದಲ್ಲಿ ಕೇರಳ ರಾಜ್ಯದ ಇಬ್ಬರು ಕ್ರೈಸ್ತ ಕನ್ಯಾಸ್ತ್ರೀಯರನ್ನು ಬಂಧಿಸಿರುವುವನ್ನು ಖಂಡಿಸಿ ಭಾನುವಾರ ಸಂತ ಜೋಸೆಫರ ದೇವಾಲಯದ ನೇತೃತ್ವದಲ್ಲಿ ಕ್ರೈಸ್ತರು ಪ್ರತಿಭಟನೆ ನಡೆಸಿದರು.
Published on

ಸಿದ್ದಾಪುರ: ಛತ್ತೀಸ್‌ಗಢ ರಾಜ್ಯದಲ್ಲಿ ಕೇರಳ ರಾಜ್ಯದ ಇಬ್ಬರು ಕ್ರೈಸ್ತ ಕನ್ಯಾಸ್ತ್ರೀಯರನ್ನು ಬಂಧಿಸಿರುವ ಕ್ರಮ ಖಂಡಿಸಿ ಭಾನುವಾರ ಸಂತ ಜೋಸೆಫರ ದೇವಾಲಯದ ನೇತೃತ್ವದಲ್ಲಿ ಕ್ರೈಸ್ತರು ಪ್ರತಿಭಟನೆ ನಡೆಸಿದರು.

ಕ್ರೈಸ್ತರು ಪ್ರಾರ್ಥನೆ ಸಲ್ಲಿಸಿದ ನಂತರ ಘಟನೆಗೆ ಖಂಡನೆ ವ್ಯಕ್ತಪಡಿಸಿದರು. ಕೇರಳ ರಾಜ್ಯದ ಇಬ್ಬರು ಕನ್ಯಾಸ್ತ್ರೀಯರನ್ನು ತಕ್ಷಣ ಬಿಡುಗಡೆ ಮಾಡಬೇಕು. ಸುಳ್ಳು ಮೊಕದ್ದಮೆ ಹಿಂಪಡೆಯಬೇಕು. ಅವರ ಬಂಧನಕ್ಕೆ ಕಾರಣಕರ್ತರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಧರ್ಮಗುರು ಮೈಕಲ್ ಮರಿ, ಸಿಸ್ಟರ್ ಮರಿಜೋರಿ, ಜಾನ್ಸನ್, ಜೋಸಿ, ಸನಿಲ್, ಜೋಸೆಫ್ ಶ್ಯಾಮ್, ಕುರಿಯನ್, ಟಿನಿ, ತೆರೇಸಾ, ಡೆನ್ನಿ, ಡೆನ್ನಿ ಕೊರಿಯ, ಸೈನಿಕೋರಿಯಾ, ತೋಮಸ್ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net