ಪೌರ ಕಾರ್ವಿುಕ ಮಹಿಳೆ ಶವ ತಂದು ಪ್ರತಿಭಟನೆ

Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಇಲ್ಲಿಯ ಮಹಾನಗರ ಪಾಲಿಕೆ ಕಚೇರಿ ಆವರಣಕ್ಕೆ ಮೃತ ಪೌರ ಕಾರ್ವಿುಕ ಮಹಿಳೆ ಮಂಜುಳಾ ಕಬ್ಬಿನ ಶವ ತಂದು ಗುತ್ತಿಗೆ ಪೌರ ಕಾರ್ವಿುಕರು ಗುರುವಾರ ಪ್ರತಿಭಟನೆ ನಡೆಸಿದರು.

ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡಗಳ ಪೌರಕಾರ್ವಿುಕರ ಮತ್ತು ನೌಕರರ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಪ್ರಸ್ತುತ ನೇರ ನೇಮಕಾತಿ ಪಟ್ಟಿಯಲ್ಲಿದ್ದರೂ ಪಾಲಿಕೆ ಆದೇಶ ಪತ್ರ ನೀಡದ ಹಿನ್ನೆಲೆಯಲ್ಲಿ ಮಂಜುಳಾ ಕಬ್ಬಿನ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಆದೇಶ ಹೊರಡಿಸಿ 8 ವರ್ಷಗಳಾದರೂ ಗುತ್ತಿಗೆ ಕಾರ್ವಿುಕರಿಗೆ ನೇರ ನೇಮಕಾತಿ ಆದೇಶ ಪತ್ರಗಳು ನೀಡದೇ ಈಗಾಗಲೇ ನೂರಾರು ಪೌರಕಾರ್ವಿುಕರು ಮೃತಪಟ್ಟಿದ್ದಾರೆ. ಮಂಜುಳಾ ಕಬ್ಬಿನ ಅವರಿಗೆ 8 ವರ್ಷಗಳ ಹಿಂದೆ ನೇಮಕಾತಿ ಆದೇಶ ಪತ್ರ ನೀಡಿದ್ದಾರೆ ಇಂದು ಅವರ ಕುಟುಂಬ ಬೀದಿ ಪಾಲು ಆಗುತ್ತಿರಲಿಲ್ಲ. ಇದಕ್ಕೆ ಪಾಲಿಕೆಯ ನಿರ್ಲಕ್ಷವೇ ಕಾರಣ ಎಂದು ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ಆರೋಪಿಸಿದರು.

ಹೋರಾಟದ ಪರಿಣಾಮವಾಗಿ ಮೃತ ಪೌರ ಕಾರ್ವಿುಕಳ ಮಗಳು ಸುಮಾ ಕಬ್ಬಿನ ಅವರಿಗೆ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಸ್ಥಳಕ್ಕೆ ಆಗಮಿಸಿ ರೂ 10 ಲಕ್ಷ ರೂ. ಪರಿಹಾರದ ಚೆಕ್ ನೀಡಿದರು. ಸುಮಾ ಕಬ್ಬಿನಗೆ ನೇರ ನೇಮಕಾತಿ ಆದೇಶ ಪತ್ರವನ್ನು ಪಾಲಿಕೆ ಸಾಮಾನ್ಯ ಸಭೆಯಲ್ಲಿ ರ್ಚಚಿಸಿ ನೀಡಲಾಗುವುದು ಎಂದು ಲಿಖಿತವಾಗಿ ತಿಳಿಸಿದರು.

ಅಲ್ಲದೇ 10 ದಿನಗಳಲ್ಲಿ 127 ಪೌರಕಾರ್ವಿುಕರಿಗೆ ನೇರ ನೇಮಕಾತಿ ಆದೇಶ ಪತ್ರಗಳನ್ನು ನೀಡಲಾಗುವುದು ಎಂದು ಲಿಖಿತ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net