ವಾಹನ ಸಂಚಾರ ತಡೆದು ಪ್ರತಿಭಟನೆ

oplus_1024
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಬೆಸಗರಹಳ್ಳಿ ಘಕದ ವತಿಯಿಂದ ಬೆಸಗರಹಳ್ಳಿ ಗ್ರಾಮದಲ್ಲಿ ಮದ್ದೂರು ಕೊಪ್ಪ ಮಾರ್ಗದ ರಸ್ತೆ ಸಂಚಾರ ತಡೆದು ಪ್ರತಿಭಟನೆ ಮಾಡಲಾಯಿತು. ಪಣ್ಣೆದೊಡ್ಡಿ ವೆಂಕಟೇಶ್, ಮಂಜೇಶ್‌ಗೌಡ್ರು, ಪ್ರಭುಲಿಂಗು, ಸೊ.ಶಿ.ಪ್ರಕಾಶ್, ಕೀಳಘಟ್ಟ ನಂಜುಂಡಯ್ಯ, ಅಣ್ಣೂರು ಮಹೇಂದ್ರ, ಶಿವಲಿಂಗಯ್ಯ, ಕೆ.ಜಿ.ಉಮೇಶ್, ಲಿಂಗರಾಜು, ರಾಮಲಿಂಗಯ್ಯ, ಮೂಡ್ಯ ಚನ್ನೇಗೌಡ, ರಾಮಣ್ಣ, ರಾಮೇಗೌಡ ಇದ್ದರು.
Published on

ಮದ್ದೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಬೆಸಗರಹಳ್ಳಿ ವೃತ್ತ ಘಟಕದ ವತಿಯಿಂದ ಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮದಲ್ಲಿ ಮದ್ದೂರು ಕೊಪ್ಪ ಮಾರ್ಗದ ರಸ್ತೆ ಸಂಚಾರ ತಡೆದು ಶುಕ್ರವಾರ ಪ್ರತಿಭಟನೆ ನಡೆಸಿದರು.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಮುಖಂಡ ಪ್ರಭುಲಿಂಗು ಮಾತನಾಡಿ, 1982ರಲ್ಲಿ ರಾಜ್ಯಾದ್ಯಂತ ನಡೆದ ರೈತ ಚಳವಳಿಯಲ್ಲಿ ಸಂದರ್ಭದಲ್ಲಿ ತಾಲೂಕಿನ ಗೆಜ್ಜಲಗೆರೆ ಗ್ರಾಮದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ನಡೆದ ರೈತ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ನಡೆದ ಗೋಲಿಬಾರ್‌ನಲ್ಲಿ ಗೆಜ್ಜಲಗೆರೆ ಗ್ರಾಮದ ಸಿದ್ದಪ್ಪ, ವಳಗೆರೆಹಳ್ಳಿ ಗ್ರಾಮದ ನಾಥಪ್ಪ ಅವರು ಗುಂಡೇಟಿಗೆ ಬಲಿಯಾಗಿ 42 ವರ್ಷ ಕಳೆದಿದೆ. ಅವರ ಪುಣ್ಯ ಸ್ಮರಣೆ ಮತ್ತು ರೈತ ಚೈತನ್ಯ ಶಕ್ತಿಗಳಾಗಿದ್ದ ದಿ.ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಎನ್.ಡಿ.ಸುಂದರೇಶ್, ಎಚ್.ಎಸ್.ರುದ್ರಪ್ಪ, ಕೆ.ಎಸ್.ಪುಟ್ಟಣ್ಣಯ್ಯ, ವಿ.ಅಶೋಕ್ ಹಾಗೂ ಕೋಣಸಾಲೆ ನರಸರಾಜು ಇವರ ಸವಿನೆನಪಿಗಾಗಿ ಈ ಹೋರಾಟ ನಡೆಸಲಾಗುತ್ತಿದೆ ಎಂದರು.

ರೈತ ಸಂಘದ ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ರಾಜಾದ್ಯಂತ ರೈತರಿಗೆ ಆತಂಕ ಉಂಟು ಮಾಡಿರುವ ರೈತರ ಜಮೀನುಗಳು ಆರ್‌ಟಿಸಿಯಲ್ಲಿ ವಕ್ಫ್ ಮಂಡಳಿ ಎಂದು ನಮೂದಾಗುತ್ತಿರುವುದನ್ನು ಅಧಿಕೃತವಾಗಿ ನಿಲ್ಲಿಸಬೇಕು. ಈಗಾಗಲೇ ಅಗಿರುವುದನ್ನು ರದ್ದುಪಡಿಸಬೇಕು. ಭತ್ತದ ಕೊಯ್ಲು ಪ್ರಾರಂಭವಾಗಿರುವುದರಿಂದ ಈ ಕೂಡಲೇ ಖರೀದಿ ಕೇಂದ್ರಗಳನ್ನು ಕೂಡಲೇ ತೆರೆಯಬೇಕು. ಯಾವುದೇ ನಿರ್ಬಂಧವಿಲ್ಲದೆ ಭತ್ತ ಖರೀದಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯಾದ್ಯಂತ ಯಾವುದೇ ಮಾನದಂಡ ಬಳಸದೆ ಬಿಪಿಎಲ್ ಕಾರ್ಡುಗಳನ್ನು ರದ್ದು ಪಡಿಸುತ್ತಿರುವುದರಿಂದ ಕಾರ್ಡುದಾರರಿಗೆ ಆರೋಗ್ಯ ಸೇವೆ, ಅನ್ನಭಾಗ್ಯ ದೊರೆಯುತ್ತಿಲ್ಲ. ಕೂಡಲೇ ಈ ವಿಚಾರವಾಗಿ ಪರಿಶೀಲನೆ ಮಾಡಬೇಕು. ಕೆಆರ್‌ಎಸ್‌ನಲ್ಲಿ ಸಾಕಷ್ಟು ನೀರು ಇರುವುದರಿಂದ ರೈತರಿಗೆ ಹಿಂಗಾರು ಬೆಳೆ ಬೆಳೆಯಲು ಕಟ್ಟು ಪದ್ಧತಿಯಲ್ಲಿ ನೀರು ಬಿಡಬೇಕು. ತಾಲೂಕುಕು ಕಚೇರಿ, ನಾಡಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ತುಂಬ ವಿಳಂಬವಾಗುತ್ತಿದ್ದು, ಸರ್ವೇ ಹದ್ದುಬಸ್ತು. ಪೋಡಿ ಕೆಲಸಗಳು ವರ್ಷಗಟ್ಟಲೆ ಹಿಡಿಯುತ್ತಿವೆ. ಭದ್ರತಾ ಪಿಂಚಣಿಗಳ ಸೇವೆಯಲ್ಲಿ ವಿಳಂಬ ನೀತಿ ತಪ್ಪಿಸಬೇಕು ಎಂದು ಆಗ್ರಹಿಸಿದರು.

ಬೆಸಗರಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ, ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರಿಗೆ ತುಂಬ ತೊಂದರೆ ಆಗುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ಬೆಸಗರಹಳ್ಳಿ - ಶಿವಪುರ ರಸ್ತೆ ತೀರ ಹದಗೆಟ್ಟು ರಸ್ತೆ ಅಪಘಾತ ಹೆಚ್ಚುತ್ತಿದ್ದು, ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತಂದು ರಸ್ತೆ ರಿಪೇರಿಗೆ ಕ್ರಮಕೈಗೊಳ್ಳಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹ ಮಾಡಿದರು.

ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಬೆಸಗರಹಳ್ಳಿ ವೃತ್ತ ಘಟಕದ ಅಧ್ಯಕ್ಷ ಪಣ್ಣೆದೊಡ್ಡಿ ವೆಂಕಟೇಶ್, ಗೌರವ ಅಧ್ಯಕ್ಷರಾದ ರಾಮಕೃಷ್ಣಯ್ಯ, ವೆಂಕಟಚಲಯ್ಯ, ಪ್ರಧಾನ ಕಾರ್ಯದರ್ಶಿಗಳಾದ ಶಿವರಾಮು, ಚನ್ನಪ್ಪ, ಉಪಾಧ್ಯಕ್ಷರಾದ ಕೃಷ್ಣ, ರಾಜೇಶ್, ಲೋಕೇಶ್, ಮಧು, ಖಜಾಂಚಿ ಜಯರಾಮು, ಮುಖಂಡರಾದ ಮಂಜೇಶ್‌ಗೌಡ್ರು, ಪ್ರಭುಲಿಂಗು, ಸೊ.ಶಿ.ಪ್ರಕಾಶ್, ಕೀಳಘಟ್ಟ ನಂಜುಂಡಯ್ಯ, ಅಣ್ಣೂರು ಮಹೇಂದ್ರ, ಶಿವಲಿಂಗಯ್ಯ, ಕೆ.ಜಿ.ಉಮೇಶ್, ಲಿಂಗರಾಜು, ರಾಮಲಿಂಗಯ್ಯ, ಮೂಡ್ಯ ಚನ್ನೇಗೌಡ, ರಾಮಣ್ಣ, ರಾಮೇಗೌಡ, ಉಮೇಶ, ರಮೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net