

ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ಸುರಕ್ಷ ಕ್ರಮಗಳಿಲ್ಲದೆ ಅಪಘಾತಗಳಾಗಿ ಸಾವು-ನೋವು ಸಂಭವಿಸುತ್ತಿದ್ದರೂ ಜನಪ್ರತಿನಿಗಳು, ಅಕಾರಿಗಳು ನಿರ್ಲಕ್ಷ್ಯ ವಹಿಸಿರುವ ಹಿನ್ನೆಲೆಯಲ್ಲಿ ಜು.4ರಂದು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಲು ಗ್ರಾಮಸ್ಥರು, ಸಂಘಟನೆಗಳ ಮುಖಂಡರು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.
ಸತ್ತೇಗಾಲ-ಹ್ಯಾಂಡ್‌ಪೋಸ್ಟ್ ಬೈಪಾಸ್ ಸಮೀಪ ಶನಿವಾರ ಜಮಾಯಿಸಿ ಸಭೆ ನಡೆಸಿದ ಗ್ರಾಮಸ್ಥರು ಈ ನಿರ್ಧಾರ ಕೈಗೊಂಡರು. ಬೈಪಾಸ್ ರಸ್ತೆಯಲ್ಲಿಯೇ ಸಾರಿಗೆ ಬಸ್‌ಗಳು ಸಂಚರಿಸುತ್ತವೆ. ಇದರಿಂದ ಸತ್ತೇಗಾಲ ಮತ್ತು ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಗ್ರಾಮದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವೇಗವಾಗಿ ವಾಹನಗಳು ಸಂಚರಿಸುತ್ತಿದ್ದು ಅಪಘಾತಗಳಾಗಿ ಸಾವು-ನೋವುಗಳು ಸಂಭವಿಸುತ್ತಿವೆೆ. ಈ ರಸ್ತೆಯಲ್ಲಿ ಸೂಚನ ಲಕಗಳಿಲ್ಲ. ಅಲ್ಲದೆ ಸತ್ತೇಗಾಲ ಹಾಗೂ ಹ್ಯಾಂಡ್‌ಪೋಸ್ಟ್ ಗ್ರಾಮಗಳ ನಡುವೆ ಹಾದು ಹೋಗಿರುವ ಬೈಪಾಸ್ ಜಂಕ್ಷನ್ ಹಾಗೂ ಸತ್ತೇಗಾಲದಿಂದ ಉಗನಿಯಾ ಗ್ರಾಮಕ್ಕೆ ಸಂಪರ್ಕ ಬೆಸೆಯುವ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಿಸಿ ಅಪಘಾತ ತಡೆಗಟ್ಟಿ ಎಂದು ಜಿಲ್ಲಾಕಾರಿ, ಉಪವಿಭಾಗಾಕಾರಿ, ಡಿವೈಎಸ್ಪಿ, ಗ್ರಾಮಾಂತರ ಪೊಲೀಸ್ ಠಾಣೆಯ ಎಸೈ ಹಾಗೂ ರಸ್ತೆ ಸಾರಿಗೆ ಅಕಾರಿಗಳಿಗೆ ಹಲವಾರು ಬಾರಿ ಮನವಿ ಪತ್ರ ನೀಡಿದರು ಕ್ರಮಕೊಂಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಅಪಘಾತದಲ್ಲಿ ಇಬ್ಬರು ಮೃತ:
ಶುಕ್ರವಾರ ಸತ್ತೇಗಾಲ ಬೈಪಾಸ್ ರಸ್ತೆಯಲ್ಲಿ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ, ಸತ್ತೇಗಾಲ ಗ್ರಾಮದ ರೈತರಾದ ನಟರಾಜು ಮತ್ತು ಮಾಯಪ್ಪ ಅಸುನೀಗಿದ್ದರು. ಈ ಹಿನ್ನೆಲೆಯಲ್ಲಿ ಸತ್ತೇಗಾಲ, ಯಡಕುರಿಯಾ, ಅಗ್ರಹಾರ, ಹ್ಯಾಂಡ್‌ಪೋಸ್ಟ್ ಶಿವನಸಮುದ್ರ, ಜಾಗೇರಿ ಇನ್ನಿತರ ಗ್ರಾಮದ ಗ್ರಾಮಸ್ಥರು, ಪಂಚಾಯಿತಿ ಅಧ್ಯಕ್ಷರು, ಸದಸ್ಯರು ರೈತ ಸಂಘದ ಮುಖಂಡರು, ಸಂಘ-ಸಂಸ್ಥೆಗಳ ಮುಖಂಡರು ಸಭೆ ಸೇರಿ ಜು.4 ರಂದು ಪ್ರತಿಭಟನೆ ನಡೆಸಲು ತೀರ್ಮಾನ ಮಾಡಿದ್ದಾರೆ. ಜೂ.30 ರಂದು ಉಪವಿಭಾಗಾಕಾರಿ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗೆ ಮನವಿಪತ್ರ ನೀಡಿ, ಬಳಿಕ ಕರ ಪತ್ರವನ್ನು ಎಲ್ಲ ಸಮುದಾಯದ ಮನೆ ಮನೆಗಳಿಗೆ ಹಂಚಲು ಸಭೆಯಲ್ಲಿ ನಿರ್ಧರಿಸಿದ್ದಾರೆ.
ಸಭೆಯಲ್ಲಿ ಹನೂರು ಬ್ಲಾಕ್ ಅಧ್ಯಕ್ಷ ಮುಕುಂದವರ್ಮ ಸತ್ತೇಗಾಲ ಗ್ರಾಪಂ ಅಧ್ಯಕ್ಷ ಮಲ್ಲೇಶ್, ಸದಸ್ಯರಾದ ಗೋವಿಂದ, ನವೀನ್‌ಕುಮಾರ್, ಆರೋಗ್ಯಸ್ವಾಮಿ ಡಾ.ಬಿ.ಆರ್.ಅಂಬೇಡ್ಕರ್ ಸತ್ಯಾದ್ರಿ ಯುವಕ ಸಂಘದ ಅಧ್ಯಕ್ಷ ಅವಿನಾಶ್, ಎಪಿಎಂಸಿ ಮಾಜಿ ಅಧ್ಯಕ್ಷ ಮಾದೇಗೌಡ ತಾಪಂ ಮಾಜಿ ಸದಸ್ಯ ಅರುಣ್, ರೈತ ಸಂಘದ ಭಾಸ್ಕರ್, ಮಾದಪ್ಪ, ಕುಮಾರ್, ಚಾರ್ಲಿಸ್, ಮುಖಂಡರಾದ ರಾಜಶೇಖರ್ ಸತ್ತೇಗಾಲ, ಹ್ಯಾಂಡ್‌ಪೋಸ್ಟ್ ಮಾದೇವ, ರವಿಶಂಕರ್, ಟಿ.ಮಹದೇವಯ್ಯ, ನಾರಾಯಣಸ್ವಾಮಿ, ಕಾಂತರಾಜು, ನಂಜುಂಡಮೂರ್ತಿ, ಶಿವಣ್ಣೆಗೌಡ, ಬಸವಣ್ಣ, ಸಿದ್ದರಾಜು, ಎಡಕುರಿಯಾ, ಬಸವರಾಜು, ನಂಜುಂಡ, ಡಾ.ಬಿ.ಆರ್.ಅಂಬೇಡ್ಕರ್ ಸತ್ಯಾದ್ರಿ ಯುವಕ ಸಂಘದ ಪದಾಕಾರಿಗಳು ಇದ್ದರು.