

ದೇವರಹಿಪ್ಪರಗಿ: ಬೆಳಗಾವಿಯಲ್ಲಿ ನಡೆದ ಪಂಚಮಸಾಲಿ ಮೀಸಲಾತಿ ಹೋರಾಟಗಾರರನ್ನು ಬಂಧಿಸಿ ಲಾಠಿಪ್ರಹಾರ ಮಾಡಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ತಾಲೂಕು ಪಂಚಮಸಾಲಿ ಸಮುದಾಯದಿಂದ ರಾಷ್ಟ್ರೀಯ ಹೆದ್ದಾರಿ-50 ಅನ್ನು ತಡೆದು ಪ್ರತಿಭಟಿಸಲಾಯಿತು.
ಪಟ್ಟಣದ ಕರಿಸಿದ್ಧೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿದ ಸಮುದಾಯದವರು ಪಾದಯಾತ್ರೆಯ ಮೂಲಕ ಪತ್ತಾರಕಟ್ಟಿ, ಮೇನ್‌ಬಜಾರ್, ಮೊಹರೆ ಹಣಮಂತ್ರಾಯ ವೃತ್ತ, ಬಸ್ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ 50ಕ್ಕೆ ತೆರಳಿ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆಗೆ ಇಳಿದರು.
ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ.ಕೆ.ಕುದರಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ಸಾಹೇಬಗೌಡ ದಾನಗೊಂಡ, ಬಾಬುಗೌಡ ಪಾಟೀಲ(ಜಿಡ್ಡಿಮನಿ), ಮಾತನಾಡಿ, ಸರ್ಕಾರದ ಕ್ರಮವನ್ನು ಖಂಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಪ್ರಕಾಶ ಸಿಂದಗಿ ಮಾತನಾಡಿ, ರಾಜ್ಯ ಸರ್ಕಾರದ ಕ್ರಮದ ಕುರಿತು ಸಮುದಾಯದ ಅಭಿಪ್ರಾಯವನ್ನು ಜಿಲ್ಲಾಡಳಿತಕ್ಕೆ ತಲುಪಿಸಲಾಗುವುದು ಎಂದು ಭರವಸೆ ನೀಡಿದಾಗ ಧರಣಿ ಕೊನೆಗೊಂಡಿತು.
ಪಂಚಮಸಾಲಿ ಸಮುದಾಯದ ತಾಲೂಕು ಅಧ್ಯಕ್ಷ ಗುರುರಾಜ ಆಕಳವಾಡಿ, ಶಿವನಗೌಡ ಪಾಟೀಲ (ಯರನಾಳ), ಪಂಚಾಕ್ಷರಿ ಮಿಂಚನಾಳ, ಸಂಗನಗೌಡ ಪಾಟೀಲ, ವಿನೋದ ಪಾಟೀಲ, ಸೋಮು ದೇವೂರ, ಚಂದ್ರಶೇಖರ ದಾನಗೊಂಡ, ರಾಮನಗೌಡ ಪಾಟೀಲ, ರಮೇಶ ಮಾಳನೂರ, ಬಸವರಾಜ ಹಳಿಮನಿ, ರವಿ ದಾನಗೊಂಡ, ವಿರೇಶ ಕುದರಿ ಇತರರಿದ್ದರು.