ಗಲಭೆಕೋರರಿಗೆ ಕಠಿಣ ಶಿಕ್ಷೆ ವಿಧಿಸಲಿ: ಬಿಜೆಪಿ ನಗರ ಘಟಕದಿಂದ ಪ್ರತಿಭಟನೆ

Protest by BJP city unit Mandya
Published on

ಮಂಡ್ಯ: ಮದ್ದೂರು ಪಟ್ಟಣದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟ ನಡೆಸಿದ ಗಲಭೆಕೋರರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಬಿಜೆಪಿ ನಗರ ಘಟಕದಿಂದ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು, ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಿಂದುಗಳ ಆರಾಧ್ಯ ದೈವ ಗಣಪತಿ ವಿಸರ್ಜನೆ ಮಾಡುವ ಮೆರವಣಿಗೆಯ ಸಂಧರ್ಭದಲ್ಲಿ ರಾಮ್ ರಹಿಂ ನಗರದಲ್ಲಿರುವ ಮಸೀದಿ ಒಳಗಿನಿಂದ ಕಿಡಿಗೇಡಿ ಗಲಭೆಕೋರರು ಗಣಪತಿ ಹಾಗೂ ಭಕ್ತರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ಯುವಕರಿಗೆ ಗಾಯಗಳಾಗಿ ಗಣಪತಿ ಮೂರ್ತಿ ಭಗ್ನಗೊಂಡಿದೆ ಎಂದು ಆಕ್ರೋಶ ಹೊರಹಾಕಿದರು.

ಕಲ್ಲು ತೂರಾಟ ಹೊರಗಡೆಯಿಂದ ಬಂದವರು ಹಾಗೂ ಸ್ಥಳೀಯ ಮುಸ್ಲಿಂ ಗೂಂಡಾಗಳಿಂದ ನಡೆದಿದೆ. ಈ ಘಟನೆ ಖಂಡಿಸಿ ಸಾರ್ವಜನಿಕರು ಗಣಪತಿ ಭಕ್ತರು ಶಾಂತಿಯುತ ಹೋರಾಟ ಮಾಡುವಾಗ ಪೊಲೀಸರು ಏಕಾಏಕಿ ಲಾಠಿ ಚಾರ್ಜ್ ಮಾಡಿರುವುದು ಖಂಡಿನೀಯ. ಮಹಿಳೆಯರ ಮೇಲೆ ಹಲ್ಲೆ ಮಾಡಿದ ಪೋಲಿಸರನ್ನು ಅಮಾನತು ಮಾಡಬೇಕು. ಕಲ್ಲು ತೂರಾಟದ ಗಲಭೆಯ ಹಿಂದೆ ಹಲವು ಸಂಘಟನೆಗಳು ಇದೆ ಎಂಬ ಅನುಮಾನ ಮೂಡಿದೆ. ಆದ್ದರಿಂದ ಕೂಡಲೆ ಸೂಕ್ತ ತನಿಖೆ ಮಾಡಬೇಕು. ಗಾಯಗೊಂಡಿರುವ ಭಕ್ತರಿಗೆ ಉಚಿತ ಚಿಕಿತ್ಸೆ ಹಾಗೂ ಆಸ್ತಿಹಾನಿಯ ವೆಚ್ಚವನ್ನು ಗಲಭೆಕೋರರಿಂದ ವಸೂಲಿ ಮಾಡಿ ತೊಂದರೆ ಆದವರಿಗೆ ಕೊಡಬೇಕು. ಒಂದು ವೇಳೆ ಗಲಭೆಕೋರರ ಬಗ್ಗೆ ಮೃದುಧೋರಣೆ ಅನುಸರಿಸಿದರೆ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ನಗರ ಅಧ್ಯಕ್ಷ ವಸಂತ್‌ಕಮಾರ್, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ರಾಜ್ಯ ಕಾರ್ಯದರ್ಶಿ ಎಚ್.ಆರ್.ಅಶೋಕ್‌ಕುಮಾರ್, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಸಿದ್ದರಾಜುಗೌಡ, ಹೊಸಹಳ್ಳಿ ಶಿವು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net