ಬಿಜೆಪಿಯಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ

8hos1p karimane strike
ಕನ್ನಳ್ಳಿ ಗ್ರಾಮದಲ್ಲಿ ಅಕೇಶಿಯಾ ಮರಗಳನ್ನು ಅಕ್ರಮ ಕಡಿತಲೆ ಮಾಡಿದವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೆ.ಕೆ.ರಾಮಣ್ಣ, ರಾಜೇಶ ಹಿರಿಮನೆ, ಸತೀಶ್, ಗಿರೀಶ್, ಸುರೇಶ್, ನಿತಿನ್, ದೇವು ಇತರರಿದ್ದರು.
Published on

ಹೊಸನಗರ: ಕರಿಮನೆ ಗ್ರಾಪಂ ವ್ಯಾಪ್ತಿಯ ಕನ್ನಳ್ಳಿ ಗ್ರಾಮದಲ್ಲಿ ಅಕೇಶಿಯಾ ಮರಗಳನ್ನು ಅಕ್ರಮ ಕಡಿತಲೆ ಮಾಡಿದವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರದಿಂದ ಗ್ರಾಪಂ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.

ಕನ್ನಳ್ಳಿಯಿಂದ ಕರಿಮನೆ ಗ್ರಾಪಂವರೆಗೆ ಪಾದಯಾತ್ರೆ ನಡೆಸಿದ ಕಾರ್ಯಕರ್ತರು ಬಳಿಕ ಗ್ರಾಪಂ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಚಾಲನೆ ನೀಡಿದರು. ನಗರ ಹೋಬಳಿ ಬಿಜೆಪಿ ಅಧ್ಯಕ್ಷ ಎನ್.ವೈ.ಸುರೇಶ್ ಮಾತನಾಡಿ, ಅಕೇಶಿಯಾ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಲಾಗಿದೆ. ಅಂದಾಜು 30 ಲಕ್ಷ ರೂ. ಬೆಲೆಬಾಳುವ ಮರಗಳನ್ನು ಕಡಿಮೆ ಹಣಕ್ಕೆ ಏಕವ್ಯಕ್ತಿ ಗುತ್ತಿಗೆದಾರನಿಗೆ ಟೆಂಡರ್ ಕರೆಯದೆ, ಯಾವುದೇ ಕಾನೂನು ಪಾಲಿಸದೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದರು.
ಗ್ರಾಪಂನಿಂದಲೇ ಈ ಹಿಂದೆ ಅಭಿವೃದ್ಧಿಗಾಗಿ ಅಕೇಶಿಯಾ ಗಿಡಗಳನ್ನು ನೆಟ್ಟು ಬೆಳೆಸಲಾಗಿತ್ತು. ಆದರೆ ಈಗ ಅಧಿಕಾರದಲ್ಲಿರುವ ಗ್ರಾಪಂ ಅಧ್ಯಕ್ಷರು, ಕೆಲವು ಸದಸ್ಯರು ಕಾನೂನು ಬಾಹಿರವಾಗಿ ಕೇವಲ 8.5 ಲಕ್ಷ ರೂ.ಗೆ ವ್ಯಾಪಾರ ಮಾಡಿದ್ದಾರೆ ಎಂದು ದೂರಿದರು.
ಪ್ರಮುಖರಾದ ಕೆ.ಕೆ.ರಾಮಣ್ಣ, ರಾಜೇಶ ಹಿರಿಮನೆ, ಸತೀಶ್, ಗಿರೀಶ್, ಸುರೇಶ್, ನಿತಿನ್, ದೇವು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net