ಇಂಧನ ದರ ಏರಿಕೆ ವಿರೋಧಿಸಿ ಆಟೋ ಚಾಲಕರಿಂದ ಪ್ರತಿಭಟನೆ

New AStrike
Published on

ಹುಬ್ಬಳ್ಳಿ : ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ ನೇತೃತ್ವದಲ್ಲಿ ನೂರಾರು ಜನ ಆಟೋ ಚಾಲಕರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಇಂಧನ ದರ ಏರಿಕೆಯಿಂದಾಗಿ ಆಟೋ ಚಾಲಕರು ನಿತ್ಯದ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಇದರಿಂದ ನಿತ್ಯೋಪಯೋಗಿ ವಸ್ತುಗಳ ಬೆಲೆಯೂ ಏರಿಕೆಯಾಗುತ್ತದೆ. ಹೀಗಾಗಿ, ರಾಜ್ಯ ಸರ್ಕಾರ ತಕ್ಷಣ ದರ ಏರಿಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಸ್ತ್ರೀಶಕ್ತಿ ಯೋಜನೆ ಕೈಬಿಡಬೇಕು. ಆಟೋ ಚಾಲಕರಿಗೆ ಕಾರ್ವಿುಕ ಗುರುತಿನ ಚೀಟಿ ನೀಡುವ ಮೂಲಕ ಕಾರ್ವಿುಕ ಇಲಾಖೆಯಿಂದ ಎಲ್ಲ ಸೌಲಭ್ಯ ಒದಗಿಸಬೇಕು. ಆಟೋ ರಿಕ್ಷಾ ಚಾಲಕರ ನಿಗಮ ಮಂಡಳಿ ರಚಿಸಬೇಕು. ಆಟೋ ರಿಕ್ಷಾ ಚಾಲಕರಿಗೆ ವಸತಿ ಕಾಲನಿ ನಿರ್ವಿುಸಬೇಕು. ಇವರ ಮಕ್ಕಳಿಗೆ ಉಚಿತ ಉನ್ನತ ವ್ಯಾಸಂಗ ಶಿಕ್ಷಣ ನೀಡಬೇಕು. ಚಾಲಕರಿಗೆ 60 ವರ್ಷ ಆದ ನಂತರ ಪಿಂಚಣಿ ನೀಡಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ, ಜೀವನ ಉತ್ಕುರಿ, ರಫೀಕ ಕುಂದಗೋಳ, ರಾಜೇಶ ಬಿಜವಾಡ, ಮಹಾವೀರ ಬಿಲಾನ, ರಾಕೇಶ ಚವ್ಹಾಣ, ಸಾಗರ ನರಗುಂದ, ಇಮ್ತಿಯಾಜ ಉಡುಪಿ, ಶಂಕರ ಆಚಾರ್ಯ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಹಸೀಲ್ದಾರ ಕಚೇರಿ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net