ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ

26 Dwd 5
Published on

ಧಾರವಾಡ: ದುಡಿಮೆಗೆ ತಕ್ಕ ವೇತನ ನೀಡುವುದು ಮತ್ತು ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಇಲ್ಲಿನ ಕಲಾಭವನ ಮೈದಾನದಿಂದ ಜಿ.ಪಂ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಪ್ರತಿಭಟಿಸಲಾಯಿತು.
ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷಿ ಮಾತನಾಡಿ, ಆಶಾಗಳ ಚಟುವಟಿಕೆಗಳನ್ನು ಆರ್‌ಸಿಎಚ್ ಪೋರ್ಟಲ್‌ಗೆ ಲಿಂಕ್ ಮಾಡಿರುವುದರಿಂದ 5-6 ತಿಂಗಳಿ0ದ ಸಂಪೂರ್ಣ ವೇತನ ಸಿಗುತ್ತಿಲ್ಲ. ಮೊಬೈಲ್ ಆಧಾರಿತ ಕೆಲಸಗಳು, ಎನ್‌ಸಿಡಿ, ಎಸಿಎ, ಟಿಬಿ ಸಂಬ0ಧಿತ ಕೆಲಸಗಳಿಗೆ ವರ್ಷಗಟ್ಟಲೆ ಪ್ರೋತ್ಸಾಹಧನ ನೀಡಿಲ್ಲ. ನಿಗದಿತ ಕೆಲಸಗಳಲ್ಲದೆ, ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಒತ್ತಾಯಪೂರ್ವಕ ಬಳಸಿಕೊಳ್ಳಲಾಗುತ್ತಿದೆ ಎಅದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯಾಽಕಾರಿ ಡಾ. ಶಶಿ ಪಾಟೀಲ ಮಾತನಾಡಿ, ಈ ಸಮಸ್ಯೆಗಳನ್ನು ಪರಿಹರಿಸಲು ನ. 6ರಂದು ಸಭೆ ನಿಗದಿಪಡಿಸಲಾಗಿದೆ ಎಂದರು.
ಎಐಯುಟಿಯುಸಿ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ, ಆಶಾ ಯುನಿಯನ್ ಜಿಲ್ಲಾಧ್ಯಕ್ಷೆ ಭುವನಾ ಬಳ್ಳಾರಿ, ಸ್ವಪ್ನಾ ಸುಳ್ಳದ, ಮಂಜುಳಾ ಗಾಡಗೋಳಿ, ರಾಜೇಶ್ವರಿ ಕೋರಿ, ಸರೋಜಾ ಮಡಿವಾಳರ, ಭಾರತಿ ಶೆಟ್ಟರ್, ಜಯಶ್ರೀ ದೇಸಾಯಿ, ರಾಧಾ ರಾಟೊಳ್ಳಿ, ರೇಣುಕಾ ಬೋಗಾರ, ಸುಜಾತಾ ಅಂಗಡಿ, ಸುಜಾತಾ ಹಿರೇಮಠ, ಶೋಭಾ ಸಾವಂತನವರ, ಗೌರಮ್ಮ ಮೇಟಿ, ಅನ್ನಪೂರ್ಣಾ ಗಿರಿಯಪ್ಪಗೌಡರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net