ಜುಲೈ 9 ರಂದು ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ

raichur
raichur
Published on

ರಾಯಚೂರು ಕೇಂದ್ರ ಸರ್ಕಾರ ಐಸಿಡಿಎಸ್ ಯೋಜನೆಯನ್ನು ಫಲಾನುಭವಿ ಆಧಾರಿತವಾಗಿ ರೂಪಿಸಲು ಹೊರಟಿರುವ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜುಲೈ 9ರಂದು ನಡೆಯಲಿರುವ ರಾಷ್ಟ್ರವ್ಯಾಪ್ತಿ ಮುಷ್ಕರ ಬೆಂಬಲಿಸಿ ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಿದೆ ಎಂದು ಸಂಘದ ಅಧ್ಯಕ್ಷ ಎಸ್. ವರಲಕ್ಷ್ಮೀ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಐಸಿಡಿಎಸ್ ಯೋಜನೆಗೆ ಅನುದಾನ ನೀಡುವದಲ್ಲಿ ಕಡಿತಗೊಳಿಸಿದೆ. ಮಕ್ಕಳು ಹಾಗೂ ಗರ್ಬಿಣಿ ಮಹಿಳೆಯರಿಗೆ ನೀಡುವ ಆಹಾರ ವಿತರಣಾ ವ್ಯವಸ್ಥೆಯನ್ನು ಆನ್‌ಲೈನ್‌ನಿಂದ ಮೊಬೈಲ್ ಆಫ್ ಮೂಲಕ ನಿರ್ವಹಿಸಲಾಗುತ್ತಿದೆ. ದುರ್ಬಳಕೆ ಮಾಡುವ ಪ್ರಶ್ನೆ ಉದ್ಬವಿಸುವದಿಲ್ಲ.

ಆದರೆ ಕೇಂದ್ರ ಸರ್ಕಾರ ಭ್ರಷ್ಟಚಾರದ ನಿಯಂತ್ರಣ ಹೆಸರಿನಲ್ಲಿ ಹೊಸ ಸಮಸ್ಯೆ ಸೃಷ್ಟಿಸುತ್ತಿದೆ. ಗರ್ಬಿಣಿ ಮಹಿಳೆಯರು ಅಂಗನವಾಡಿ ಕೇಂದ್ರಕ್ಕೆ ಬರುವದಿಲ್ಲ. ಅಂತಹವರಿಗೆ ಆಧಾರ ಲಿಂಕ್ ಮಾಡಿ ಮೂರು ಓಟಿಪಿ ಪಡೆದು ಮಾಹಿತಿ ನೀಡಬೇಕು. ಇದು ನಿರ್ವಹಣೆ ಸಾಧ್ಯವಾಗುತ್ತಿಲ್ಲ. 4 ಜಿ ಮತ್ತು 5 ಜಿ ನೆಟ್‌ವರ್ಕ್ ವ್ಯವಸ್ಥೆ ಸೇರಿದಂತೆ ತಾಂತ್ರಿಕ ಸಮಸ್ಯೆ ನಿವಾರಿಸಬೇಕಿದೆ. ಆದರೆ ಸರ್ಕಾರ ಕೇವಲ ನೊಂದಣಿ ಮಾಡಲು ಮಾತ್ರ ಹೇಳುತ್ತಿದೆ ಹೊರತು ಸಮಸ್ಯೆ ನಿವಾರಿಸುತ್ತಿಲ್ಲ. ಅಪೌಷ್ಟಿಕತೆ ನಿವಾರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಅಂಗನವಾಡಿ ಕೇಂದ್ರಗಳನ್ನು ಬಲವರ್ದನೆ ಮಾಡುವ ಬದಲು ಅಸ್ಥಿರಗೊಳಿಸುವಕೆಲಸ ಕೇಂದ್ರ ಸರ್ಕಾರ ಪ್ರಾರಂಭಿಸಿದೆ.ಪೌಷ್ಠಿಕತೆ ಹೆಚ್ಚಳ ಮತ್ತು ಆಹಾರ ಭದ್ರತಾ ಕಾಯ್ದೆ ವಿರುದ್ದವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ.

ಸರ್ಕಾರ ಕ್ರಮ ವಿರೋಧಿಸಿ ಜುಲೈ 9 ರಂದು ರಾಷ್ಟ್ರ ವ್ಯಾಪಿಮುಷ್ಕರ ಬೆಂಬಲಿಸಿ ಭಾಗವಹಿಸುವದು, ನವಂಬರ್‌ನಲ್ಲಿ ರಾಜ್ಯದ ಸಂಸದರುಗಳಿಗೆ ಮನವಿ ನೀಡಿ ಪ್ರತಿಭಟನೆ ನಡೆಸುವದು . ಡಿಸೆಂಬರ್‌ನಲ್ಲಿ ಕೇಂದ್ರ ಸಚಿವರ ಮನೆಗಳ ಮುಂದೆ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಸುನಂದಾ,ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಚ್.ಪದ್ಮಾ, ರಂಗಮ್ಮ ಅನ್ವರ್, ವರಲಕ್ಷ್ಮಿ ಯಾದಗಿರಿ ಜಿಲ್ಲಾಧ್ಯಕ್ಷ ಅನಿತಾ, ಕಾರ್ಯದರ್ಶಿ ಬಸಲಿಂಗಮ್ಮ, ಬಸ್ಸಮ್ಮ, ಡಿ.ಎಸ್.ಶರಣಬಸವ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net