ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ

18-07-2020 ALRp01
Published on

ಆಲೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರ ಸಂಘದ ವತಿಯಿಂದ ಶುಕ್ರವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.

ಸಂಘದ ತಾಲೂಕು ಅಧ್ಯಕ್ಷೆ ಶಾರದಾ ಮಾತನಾಡಿ, ಲಾಕ್‌ಡೌನ್ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕತೆರ್ಯರು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಅವರ ಮೇಲೆ ಹಲ್ಲೆ ಮಾಡಲಾಗುತ್ತಿದ್ದು, ರಕ್ಷಣೆ ಕೊಡುವ ಕೆಲಸ ಆಗಬೇಕು. ಜತೆಗೆ ಐಸಿಡಿಎಸ್ ಯೋಜನೆ ಅನುದಾನ ಹೆಚ್ಚಳ ಮಾಡುವುದರ ಜತೆಗೆ ಗುಣಮಟ್ಟದ ಸ್ಯಾನಿಟೈಸರ್, ಮಾಸ್ಕ್ ಹಾಗೂ ಪಿಪಿಟಿ ಕೀಟಗಳನ್ನು ಒದಗಿಸಬೇಕು ಎಂದರು.

ಅಂತಿಮವಾಗಿ ತಹಸೀಲ್ದಾರ್ ಶಿರೀನ್ ತಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು. ಸಂಘದ ಜಿಲ್ಲಾ ಧ್ಯಕ್ಷೆ ಇಂದ್ರಮ್ಮ, ತಾಲೂಕು ಉಪಾಧ್ಯಕ್ಷೆ ಕವಿತಾ, ಕಾರ್ಯದರ್ಶಿ ಮೀನಾಕ್ಷಮ್ಮ, ಖಜಾಂಚಿ ಸುಶೀಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net