ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತೀಯ ಜೀವ ವಿಮಾ ನಿಗಮದ ಒಕ್ಕೂಟದಿಂದ ಪ್ರತಿಭಟನೆ

LIC
Published on

ಮೈಸೂರು: ಪಾಲಿಸಿಗಳ ಮೇಲಿನ ಲಾಭಾಂಶ ಏರಿಸುವುದು, ಸಾಲದ ಬಡ್ಡಿಯನ್ನು ಕಡಿತಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತೀಯ ಜೀವ ವಿಮಾ ನಿಗಮದ ಒಕ್ಕೂಟ, ಭಾರತೀಯ ಜೀವ ವಿಮಾ ನಿಗಮ, ಶಾಖೆ-2ರ ವತಿಯಿಂದ ಶುಕ್ರವಾರ ಬನ್ನಿ ಮಂಟಪದ ಭಾರತೀಯ ಜೀವ ವಿಮಾ ನಿಗಮದ ಬಳಿ ಪ್ರತಿಭಟನೆ ನಡೆಸಲಾಯಿತು.


ಐದು ವರ್ಷ ಮೇಲ್ಪಟ್ಟ ರದ್ದಾದ ಪಾಲಿಸಿಗಳನ್ನು ಪುನಶ್ಚೇತನ ಗೊಳಿಸಬೇಕು. ಗ್ರಾಹಕರು ಹಿಂದಿರುಗಿ ಪಡೆಯದ ಮೊತ್ತವನ್ನು ಗ್ರಾಹಕರ ಕಲ್ಯಾಣಕ್ಕೆ ಉಪಯೋಗಿಸಬೇಕು. ಜೀವ ವಿಮಾ ನಿಗಮದಲ್ಲಿ ಒಮ್ಮೆ ಮಾತ್ರ ಕೆವೈಸಿಯನ್ನು ಪಡೆಯಬೇಕು. ಗ್ರಾಚುಟಿ ಮೊತ್ತವನ್ನು 10 ಲಕ್ಷಕ್ಕೆ ಏರಿಸಬೇಕು. ಆನ್‌ಲೈನ್‌ನಲ್ಲಿ ನೀಡುತ್ತಿರುವ ಪಾಲಿಸಿಗಳಿಗೆ ರಿಯಾಯಿತಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಕಾರ್ಯದರ್ಶಿ ಪುಟ್ಟಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net