ಶಾಸಕರ ವಿರುದ್ಧ ಆಮ್ ಆದ್ಮಿ ಪಾರ್ಟಿ ಕಾರ‌್ಯಕರ್ತರ ಪ್ರತಿಭಟನೆ

CTD 19 AM ADMI PARATI (2)-..02
Published on

ಚಿತ್ರದುರ್ಗ: ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಅವರ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪಗಳ ಕುರಿತು ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಆಮ್ ಆದ್ಮಿ ಪಾ ರ್ಟಿ ಕಾರ‌್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನೀಲಕಂಠೇಶ್ವರ ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ‌್ಯಕರ್ತರು,ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಿಂದ ಚಿತ್ರದುರ್ಗಕ್ಕೆ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಸಕರ ವಿರುದ್ಧ ಭ್ರಷ್ಟಾ ಚರಗಳ ವಿರುದ್ಧ ತನಿಖೆಗೆ ನಡೆಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್,ಫಾರೂಕ್‌ಅಲಿ,ಕೆಂಚಪ್ಪ,ರಾಧಾ,ಬಿ.ರಾಧಾ,ಮೇಘನಾ,ಹುಲ್ಲೂರು ರಾಜಣ್ಣ,ರವಿ,ಸುಭಾಷ್, ಸಂತೋಷ್,ಮೊಹಮ್ಮದ್ ಜಮೀರ್,ಮಹಮ್ಮದ್‌ಗೌಸ್, ಸಾದತ್,ಶಾಮೀರ್,ತಿಪ್ಪೇಸ್ವಾಮಿ ಇತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net