ರೈತರಿಗೆ ಸ್ವಾವಲಂಬಿ ಬದುಕು ನಷ್ಟವಾಗುವ ಭೀತಿ : ಕಿಶೋರ್ ಶಿರಾಡಿ ಹೇಳಿಕೆ ಕಸ್ತೂರಿ ರಂಗನ್ ವರದಿ ವಿರುದ್ಧ ಪ್ರತಿಭಟನೆ

New Project (40)
Published on

ಉಪ್ಪಿನಂಗಡಿ: ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ಕೈಬಿಡಬೇಕು. ಪಶ್ಚಿಮ ಘಟ್ಟಕ್ಕೂ, ಜನವಸತಿ ಪ್ರದೇಶಕ್ಕೂ, ಕೃಷಿ ಭೂಮಿಗಳಿಗೆ ಕಂದಾಯ ಮತ್ತು ಅರಣ್ಯ ಇಲಾಖೆಗಳು ಜಂಟಿ ಸರ್ವೇ ನಡೆಸಿ ಗಡಿ ಗುರುತು ಮಾಡಬೇಕೆಂದು ಆಗ್ರಹಿಸಿ ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ವತಿಯಿಂದ ಜ.21ರಂದು ಉಪ್ಪಿನಂಗಡಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ವಲಯ ಅರಣ್ಯಾಧಿಕಾರಿಗಳ ಕಚೇರಿಯ ಗೇಟ್ ಮುಂಭಾಗ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ, ಕಸ್ತೂರಿ ರಂಗನ್ ವರದಿ ಜಾರಿಗೆ ಮುಂದಾಗುವ ಮೂಲಕ ಅರಣ್ಯ ಇಲಾಖೆಯು ರೈತರ ಬದುಕುವ ಹಕ್ಕನ್ನು ಕಸಿಯುವ ಪ್ರಯತ್ನ ಮಾಡುತ್ತಿದೆ. ಕರೊನಾ ಕಾಲಘಟ್ಟದಲ್ಲೂ ಕಂಗೆಡದ ರೈತ ಈಗ ಅರಣ್ಯಾಧಿಕಾರಿಗಳು ನೀಡುವ ಉಪಟಳದಿಂದ ತಮ್ಮ ಸ್ವಾವಲಂಬಿ ಬದುಕನ್ನು ಕಳೆದುಕೊಂಡು ಧೃತಿಗೆಡುವಂತಾಗಿದೆ. ಕಸ್ತೂರಿ ರಂಗನ್ ವರದಿಯೆಂಬುದು ಅರಣ್ಯದಂಚಿನ ರೈತರ ತಲೆಯ ಮೇಲೆ ತೂಗುಗತ್ತಿಯಂತೆ ನೇತಾಡುತ್ತಿದೆ ಎಂದರು.

ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ಸಲಹೆಗಾರ ಸೈಯ್ಯದ್ ಮೀರಾ ಸಾಹೇಬ್ ಕಡಬ ಮಾತನಾಡಿದರು. ಈ ಬಗ್ಗೆ ಮನವಿಯನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಎಚ್.ಟಿ. ಅವರಿಗೆ ಸಲ್ಲಿಸಲಾಯಿತು. ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ಸಲಹೆಗಾರರಾದ ಪ್ರಮೋದ್ ಕಳೆಂಜ, ಪ್ರಸನ್ನ ಕಳೆಂಜ, ಧನಂಜಯ, ನಿತ್ಯಾನಂದ ರೈ, ಹರೀಶ್ ಕೆ.ಬಿ., ರಾಮಣ್ಣ ಗೌಡ, ನೋಣಯ್ಯ ಗೌಡ, ಕೃಷ್ಣಪ್ಪ ಗೌಡ, ರಮೇಶ್ ಶಿಬಾಜೆ, ಬಾಲಕೃಷ್ಣ ಶಿಬಾಜೆ, ಜಾರ್ಜ್, ಪ್ರಶಾಂತ್, ಜಾನ್ಸನ್ ಹಾಗೂ ಶಿಶಿಲ, ಕಳೆಂಜ, ಶಿಬಾಜೆ, ಅರಸಿನಮಕ್ಕಿ, ಹತ್ಯಡ್ಕ, ಶಿರಾಡಿ, ರೆಖ್ಯ ಗ್ರಾಮವಾಸಿಗಳು ಭಾಗವಹಿಸಿದರು.

ಸ್ವಾತಂತ್ರೃ ಬಂದ ಬಳಿಕ ಅರಣ್ಯ ಹಾಗೂ ಕಂದಾಯ ಇಲಾಖಾಧಿಕಾರಿಗಳು ಜಂಟಿ ಸರ್ವೇ ಮಾಡಡ ಪರಿಣಾಮ ಬೈಂದೂರು ಸೆಷನ್ಸ್ ಕೋರ್ಟ್, ಐತ್ತೂರು ಗ್ರಾ.ಪಂ., ಧರ್ಮಸ್ಥಳ ಪೊಲೀಸ್ ಠಾಣೆ ಹೀಗೆ ಅದೆಷ್ಟೋ ಸಾರ್ವಜನಿಕ ಕಚೇರಿಗಳು, ಜನವಸತಿ ಪ್ರದೇಶಗಳು ಪರಿಭಾವಿತ ಅರಣ್ಯ ಪ್ರದೇಶದೊಳಗೆ ಬರುವಂತಾಗಿದೆ. ಹಕ್ಕುಪತ್ರವಿದ್ದರೂ ರೈತರ ಜಾಗಗಳು ಪ್ಲಾಟಿಂಗ್ ನಡೆಸಲು, ಮನೆ ಕಟ್ಟಲು ಸಮಸ್ಯೆಯಾಗಿದೆ. ಕಿಶೋರ್ ಶಿರಾಡಿ, ಮಲೆನಾಡು ಜನ ಹಿತರಕ್ಷಣಾ ವೇದಿಕೆ ಸಂಚಾಲಕ https://www.vijayavani.net/training-workshop-7 https://www.vijayavani.net/upazila-kpsta-meeting

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net