

ಬ್ರಹ್ಮಾವರ: ವೈದ್ಯ ವಿದ್ಯಾರ್ಥಿನಿ ಹತ್ಯೆ ಮತ್ತು ಅತ್ಯಾಚಾರ ಖಂಡಿಸಿ ಡಾ.ಸುಷ್ಮಾ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಬ್ರಹ್ಮಾವರ ಭಾಗದ ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಖಾಸಗಿ ವೈದ್ಯರಿಂದ ಶನಿವಾರ ಸಂಜೆ ಪ್ರತಿಭಟನೆ ನಡೆಯಿತು.
ಬಳಿಕ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಅಜಿತ್ ಶೆಟ್ಟಿಯವರಿಂದ ಬ್ರಹ್ಮಾವರ ತಾಲೂಕು ತಹಸೀಲ್ದಾರ ಶ್ರೀಕಾಂತ್ ಹೆಗ್ಡೆಯವರ ಮೂಲಕ ಮನವಿ ನೀಡಲಾಯಿತು. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಇಂಡಿಯನ್ ಡೆಂಟಲ್ ಅಸೋಸಿಯೇಷನ್, ಕರ್ನಾಟಕ ಸರ್ಕಾರಿ ವೈದ್ಯರ ಸಂಘ, ಆಯುಷ್ ವೈದ್ಯರ ಸಂಘ,ಪಶು ವೈದ್ಯರ ಸಂಘ, ರೋಟರಿ ಬ್ರಹ್ಮಾವರ, ರೋಟರಿ ರಾಯಲ್ ಬ್ರಹ್ಮಾವರ, ಜಯಂಟ್ಸ್ ಗ್ರೂಪ್ ಬ್ರಹ್ಮಾವರ, ಹಿರಿಯ ನಾಗರಿಕರ ಸಂಘ ಬ್ರಹ್ಮಾವರ, ಲಯನ್ಸ್ ಕ್ಲಬ್ ಬ್ರಹ್ಮಾವರ, ಸಮೃದ್ಧಿ ಮಹಿಳಾ ಸಂಘ ಪೇತ್ರಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.