ಅರ್ಬಾಜ್ ಕೊಲೆ‌ ಮಾಡಿದವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಪ್ರತಿಭಟನೆ

Screenshot_2023-07-17-16-24-04-44.jpg
Published on

ಬೆಳಗಾವಿ: ಪೀರನವಾಡಿಯ ಯುವಕ ಅರ್ಬಾಜ್ ರಫಿಕ್ ಮುಲ್ಲಾ ಕೊಲೆ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಟಿಪ್ಪು ಸುಲ್ತಾನ್ ಸಂಘರ್ಷ ಸಮಿತಿ ನೇತೃತ್ವದಲ್ಲಿ ಕುಟುಂಬಸ್ಥರು, ಸ್ಥಳೀಯರು ಇಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದರು.
ಅರ್ಬಾಜ್ ಸಾವಿಗೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಘೋಷಣೆ ಮೊಳಗಿಸಿದ ಪ್ರತಿಭಟನಾಕಾರರು ಬೆಳಗಾವಿ ಜಿಲ್ಲೆಯ ಖಾನಾಪುರದ ಅರ್ಬಾಜ್ ಎಂಬ ಯುವಕನನ್ನು ಈ ಹಿಂದೆ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈಗ ಪೀರನವಾಡಿಯ ಅರ್ಬಾಜ್ ಮುಲ್ಲಾ ಎಂಬಾತನನ್ನು ಮೊದಲು ಅಪಹರಣ ಮಾಡಿಕೊಂಡು ಹೋದ ದುಷ್ಕರ್ಮಿಗಳು ಹತ್ಯೆ ಮಾಡಿ ಶವ ಬೀಸಾಕಿ ಹೋಗಿದ್ದಾರೆ. ಈ ಎರಡೂ ಪ್ರಕರಣ ಗಮನಿಸಿದರೆ ಕೆಲವು ಕಿಡಿಗೇಡಿಗಳು ಮುಸ್ಲಿಂ ಸಮುದಾಯವನ್ನು ಗುರಿಯಾಗಿರಿಸಿಕೊಂಡು ಇಂತಹ ದುಷ್ಕೃತ್ಯ ಮಾಡುತ್ತಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಯಾವುದೇ ಹೆದರಿಕೆ ಇಲ್ಲದೇ ಇಂತಹ ಕೃತ್ಯ ನಡೆಯುತ್ತಿದ್ದು, ಇದರ ಕಾಣದ ಕೈವಾಡಗಳ ಶಂಕೆ ಎದ್ದು ಕಾಣುತ್ತಿದ್ದು, ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಮೂಲಕ ನಗರದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು. ಅದೇ ರೀತಿ ಆರೋಪಿಗಳಿಗೆ ಕಠಿಣಾತಿ ಕಠಿಣ ಗಲ್ಲು ಶಿಕ್ಷೆ ವಿಧಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಅತೀಕ ಮುಜಾವರ್, ಫಜಲ್ ಪಠಾಣ, ಶಾಬಾಜ್ ಮಾಡಿವಾಲೆ, ಪ್ರಮೋದ ಪಾಟೀಲ, ವಾಸೀಮ್ ಬೇಪಾರಿ, ಮಾಶಾಬಿ, ಸಾಯಿರಾ ಮುಲ್ಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net