

ಸಿಂಧನೂರು: ವಕ್ಫ್ ತಿದ್ದುಪಡಿ ಕಾಯ್ದೆ-2025 ವಿರೋಧಿಸಿ ಜಮಾಅತೆ ಇಸ್ಲಾಮಿ ಹಿಂದ್‌ನಿಂದ ಶುಕ್ರವಾರ ನಗರದ ಮಸ್ಜೀದ್ ಏ ಹುದಾ ಮುಂಭಾಗದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಲಾಯಿತು.
ವಕ್ಫ್ ತಿದ್ದುಪಡಿ ಕಾಯ್ದೆ 2025 ಅಸಂವಿಧಾನಿಕ, ಭರವಸೆ ಅಲ್ಲ ನಿರಾಸೆ, ರದ್ದುಗೊಳಿಸಿ ಸೇರಿದಂತೆ ಇತರ ಭಿತ್ತಿ ಪತ್ರಗಳನ್ನು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.
ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಮಹ್ಮದ್ ಹುಸೇನ್, ಕಾರ್ಯದರ್ಶಿ ಶರ್ಫುದ್ದೀನ್, ಹುದಾ ಮಸೀದಿಯ ಇಮಾಮ ಹಾಫಿಜ್ ಸೈಯದ್ ಉಸಾಮ, ನಿವೃತ್ತ ಶಿಕ್ಷಕ ಹುಸೇನ್ ಬಾಷಾ, ಸ್ವಾಲಿಡಾರಿಟಿ ಯೂತ್ ಮೂಮೆಂಟ್ ಜಿಲ್ಲಾಧ್ಯಕ್ಷ ವಸಿಂ, ಮಹ್ಮದ್ ಚೌದ್ರಿ, ನಯೀಮ್ ಪಾಷಾ ಚೌದ್ರಿ, ಮೌಲಾಸಾಬ್, ಮೆಹಬೂಬ್‌ಸಾಬ್ ಅತ್ತಾರ, ಬಾವುದ್ದೀನ್, ಆಲಂ ಬಾಷಾ ಚೌದ್ರಿ, ಮುಸ್ತಾಕ್, ಮಹ್ಮದ್ ಮೇಸ್ತ್ರಿ, ಮೆಹಬೂಬ್‌ಸಾಬ್, ಗೌಸ್ ಸಾಬ್ ಇನಾಂದಾರ್ ಇದ್ದರು.