ವಕ್ಫ್ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

Protest against Wakf amendment
ಬಾದಾಮಿಯ ಕಾನಿಪ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷ ಮಹಮ್ಮದ ಯೂಸೂ ಪೀರ್ಜಾದೆ ಮಾತನಾಡಿದರು. ರಾಜಮಹ್ಮದ ಬಾಗವಾನ, ಇಸ್ಮಾಯಿಲ್ ಬಾಗವಾನ, ತಯ್ಯಬಲಿ ಅಲಿ ಖಲೀ, ಬಾಬಜಾನ ಗೋಲಂದಾಜ, ಅಬ್ದುಲಖಾದರ ಜಮಾದಾರ ಮತ್ತಿತರರಿದ್ದಾರೆ.
Published on

ಬಾದಾಮಿ: ಕೇಂದ್ರ ಸರ್ಕಾರ ವಕ್ಛ್ ಕಾಯ್ದೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ನಗರದಲ್ಲಿ ಏ.22 ರಂದು ಬೆಳಗ್ಗೆ 10.30ಕ್ಕೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಮಿಟಿ ಅಧ್ಯಕ್ಷ ಮಹಮ್ಮದ ಯೂಸ್ು ಪೀರ್ಜಾದೆ ತಿಳಿಸಿದರು.

ನಗರದ ಕಾನಿಪ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ್ಯಾಸಿಸ್ಟ್ ಕೇಂದ್ರ ಸರ್ಕಾರವು ವಕ್ಛ್ ಕಾಯ್ದೆಯನ್ನು ತಿದ್ದುಪಡಿ ಮಾಡಿ ಜಾರಿಗೊಳಿಸುತ್ತಿದೆ. ಈ ಅನೀತಿ, ದಯನೀಯ ವೈಲ್ಯ, ದ್ವೇಷ ರಾಜಕೀಯ, ತಾರತಮ್ಯ ಆಡಳಿತ, ಬಂಡಶಾಹಿಗಳ ಕೋಟ್ಯಂತರ ರೂ.ಸಾಲ ಮನ್ನಾ ಮುಂತಾದವುಗಳ ವಿರುದ್ಧ ದೇಶದ ಜನರು ಹೋರಾಟ ಮಾಡುತ್ತಿದ್ದಾರೆ. ಕರಾಳ ತಿದ್ದುಪಡಿ ವಕ್ಛ್ ಕಾಯ್ದೆ ಜಾರಿ ಮಾಡಿರುವುದನ್ನು ವಿರೋಧಿಸಿ ನಗರದಲ್ಲಿ ರ‌್ಯಾಲಿ ಮೂಲಕ ಶಾಂತಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.

ರ‌್ಯಾಲಿಯು ಅಂಜುಮನ್ ಶಾಲಾವರಣದಿಂದ ಆರಂಭವಾಗಿ ಮುಖ್ಯ ರಸ್ತೆಯ ಮೂಲಕ ಬಸವೇಶ್ವರ ಸರ್ಕಲ್ ಸುತ್ತುವರೆದು ಪುನಃ ರಾಮದುರ್ಗ ವೃತ್ತದವರೆಗೆ ಬಂದು ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗುವುದು. ತಾಲೂಕಿನ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.

ರಾಜಮಹ್ಮದ ಬಾಗವಾನ, ಅಂಜುಮನ್ ಕಮಿಟಿ ಉಪಾಧ್ಯಕ್ಷ ಇಸ್ಮಾಯಿಲ್ ಬಾಗವಾನ, ಸದಸ್ಯರಾದ ತಯ್ಯಬಲಿ ಅಲಿ ಖಲೀ, ಬಾಬಜಾನ ಗೋಲಂದಾಜ, ಅಬ್ದುಲಖಾದರ ಜಮಾದಾರ, ಬಸೀರಅಹ್ಮದ ಅತ್ತಾರ, ದಾದಾಪೀರ ಇಟಗಿ, ಮಹಮ್ಮದ್‌ಅಲಿ ಖಲೀ, ಅಮೀನ ನಾಯಕ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net