ಕಳಂಕ ತರುವವರ ವಿರುದ್ಧ ಪ್ರತಿಭಟನೆ

12Rayabag1
Published on

ರಾಯಬಾಗ: ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಹೆಸರಿಗೆ ಕಳಂಕ ತರುವ ಕೆಲಸ ಮಾಡುತ್ತಿರುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಡಾ.ಸಿದ್ಧಸೇನ ಮುನಿ ಮಹಾರಾಜರು ಒತ್ತಾಯಿಸಿದರು.

ಪಟ್ಟಣದಲ್ಲಿ ಮಹಾವೀರ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಭಕ್ತಾಭಿಮಾನಿಗಳೊಂದಿಗೆ ಮಂಗಳವಾರ ತಹಸೀಲ್ದಾರ್ ಸುರೇಶ ಮುಂಜೆಗೆ ಮನವಿ ಸಲ್ಲಿಸಿ ಮಾತನಾಡಿದರು.

ಸರ್ಕಾರ ಮಾಡದ ಕೆಲಸವನ್ನು ಮಾಡುತ್ತಿರುವ ಡಾ.ವೀರೇಂದ್ರ ಹೆಗ್ಗಡೆ ಪರ ಒಂದಾಗಿ ನಿಲ್ಲಬೇಕು. ಆ.24ರಂದು ಧರ್ಮಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬೆಂಬಲ ವ್ಯಕ್ತಪಡಿಸಬೇಕೆಂದರು.

ಯುವ ಧುರೀಣ ಧೂಳಗೌಡ ಪಾಟೀಲ ಮಾತನಾಡಿ, ಯೂಟ್ಯೂಬರ್ ಸಮೀರ್, ಮಹೇಶ ತಿಮರೋಡಿ, ಗಿರೀಶ ಮಟ್ಟೆನ್ನವರ, ಸಂತೋಷ ಶೆಟ್ಟಿ, ಜಯಂತ ಟಿ. ಹಾಗೂ ಸಹಚರರು ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ ಹಾಗೂ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ಕಳಂಕ ತರುವ ಕೆಲಸ ಮಾಡುತ್ತಿದ್ದು, ಸೂಕ್ತ ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪಟ್ಟಣದ ಹನುಮಾನ ದೇವಸ್ಥಾನದಿಂದ ಮಹಾವೀರ ಭವನದ ವರೆಗೆ ಮೆರವಣಿಗೆ ಮೂಲಕ ಆಗಮಿಸಿದ ಧರ್ಮಸ್ಥಳ ಭಕ್ತಾಭಿಮಾನಿಗಳು ಮತ್ತು ವಿವಿಧ ಹಿಂದು ಪರ ಸಂಘಟನೆ ಮುಖಂಡರು ಯೂಟ್ಯೂಬರ್ಸ್‌ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ನಂದಿಕುರಳಿ ವೀರಭದ್ರ ಸ್ವಾಮೀಜಿ, ಶಂಕರಾನಂದ ಸ್ವಾಮೀಜಿ, ಮುಖಂಡರಾದ ಡಿ.ಸಿ.ಸದಲಗಿ, ಈರಗೌಡ ಪಾಟೀಲ, ಡಿ.ಎಸ್.ನಾಯಿಕ, ಪಾರೀಸ ಉಗಾರೆ, ಎಸ್.ಟಿ. ಮುನ್ನೊಳಿ, ಜಿನ್ನಪ್ಪ ಬಡೋರೆ, ಶೀತಲ ಬೇಡಕಿಹಾಳ, ಅಣ್ಣಾಸಾಹೇಬ ಖೆಮಲಾಪೂರೆ, ಅಪ್ಪಾಸಾಹೇಬ ಮೈಶಾಳೆ, ಸಂದೇಶ ಶೆಟ್ಟಿ, ಕುಂತಿನಾಥ ಮಗದುಮ್ಮ, ನಿಂಗಪ್ಪ ಪಕಾಂಡಿ, ವೆಂಕಟೇಶ ಬನವಣೆ, ಜಿನ್ನಪ್ಪ ಖೆಮಲಾಪೂರೆ, ಸನ್ಮತಿ ಶೆಟ್ಟಿ, ಸಿದ್ದಪ್ಪ ನಾಗನೂರ, ಗಿರೀಶ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net