

ಮಲ್ಲಮ್ಮನ ಬೆಳವಡಿ: ರಾಣಿ ಬೆಳವಡಿ ಮಲ್ಲಮ್ಮಳ ಕುರಿತು ಕೃತಿಯಲ್ಲಿ ತಪ್ಪಾಗಿ ಬರೆದಿರುವ ಸಾಹಿತಿ ವಿರುದ್ಧ ಬೆಳವಡಿ ಗ್ರಾಮಸ್ಥರು ಭಾನುವಾರ ಪ್ರತಿಭಟಿಸಿದರು. ಬೆಳವಡಿ ಮಲ್ಲಮ್ಮಳ ಇತಿಹಾಸದ ಬಗ್ಗೆ ಸಾಹಿತಿಗಳು ತಪ್ಪಾಗಿ ಕೃತಿ ರಚಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಕೂಡಲೇ ಅವರ ಕೃತಿ ರದ್ದುಗೊಳಿಸಿ ಸಮರ್ಪಕ ಇತಿಹಾಸ ಒಳಗೊಂಡ ಹೊಸ ಕೃತಿ ರಚಿಸಬೇಕೆಂದು ಒತ್ತಾಯಿಸಿದರು. ಗ್ರಾಪಂ ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿ, ಬಸಯ್ಯಸ್ವಾಮಿ ವಿರಕ್ತಮಠ, ಪ್ರಕಾಶ ಹುಂಬಿ, ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ರಾಚಪ್ಪ ಮಟ್ಟಿ, ಗ್ರಾಪಂ ಸದಸ್ಯರಾದ ವಿಶ್ವನಾಥ ಕರಿಕಟ್ಟಿ, ಗಜಾನನ ರಾಣೋಜಿ, ಪ್ರಕಾಶ, ಕಾರಿಮನಿ ಬೆಳಕು ಸಂಸ್ಥೆ ಅಧ್ಯಕ್ಷ ಡಾ. ಡಿ.ವೈ.ಗರಗದ, ಬಸವರಾಜ ಗುಡ್ಡದಮಠ, ಬೆಳವಡಿ ಮಲ್ಲಮ್ಮ ಮಹಿಳಾ ಪ್ರತಿಷ್ಠಾನದ ಕಾರ್ಯದರ್ಶಿ ಸವಿತಾ ಪಾಟೀಲ, ರೋಹಿತ್ ಕುಲಕರ್ಣಿ, ವೀರನಗೌಡ ಪಾಟೀಲ ಇತರರಿದ್ದರು.