

ಹುಬ್ಬಳ್ಳಿ: ರಾಜ್ಯ ಸರ್ಕಾರ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದಿರುವುದನ್ನು ಖಂಡಿಸಿ ಶ್ರೀರಾಮ ಸೇನೆ ಕಾರ್ಯಕರ್ತರು, ನಗರದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.
ಗಲಭೆಕೋರರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ, ದೇವಸ್ಥಾನ ಹಾಗೂ ಆಸ್ಪತ್ರೆಯ ಮೇಲೆ ದಾಳಿ ಮಾಡಿದ್ದರು. ಇಂಥ ದಾಂಧಲೆ ನಡೆಸಿದ್ದ ಈ ಪ್ರಕರಣವು ಎನ್‌ಐಎನಲ್ಲಿದೆ. ಇನ್ನೂ ವಿಚಾರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ವಾಪಸ್ ಪಡೆದಿರುವುದು ಖಂಡನೀಯ. ಒಂದು ವೇಳೆ ಮೊಕದ್ದಮೆ ವಾಪಸ್ ಪಡೆದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಪ್ರಮುಖರಾದ ಅಪ್ಪಣ್ಣ ದಿವಟಗಿ, ಮಂಜು ಕಾಟಕರ, ಬಸು ದುರ್ಗದ, ಬಸವರಾಜ ಗೌಡರ, ಗುಣಧರ ದಢೂತಿ, ನಾಗರಾಜ ಹುರಕಡ್ಲಿ, ನಾಗರಾಜ ಸೌತೆಕಾಯಿ ಇತರರು ಇದ್ದರು.