ರಾಜ್ಯ ಸರ್ಕಾರದ ವಿರುದ್ಧ ಆ.16 ರಿಂದ 18 ರವರೆ ಹೋರಾಟ-ಎ.ನಾರಾಯಣಸ್ವಾಮಿ

RAICHUR
RAICHUR
Published on

ರಾಯಚೂರು ಪರಿಶಿಷ್ಟ ಜಾತಿಗಳ ಒಳಮೀಸಲು ವರ್ಗಿಕರಣಕ್ಕೆ ಸುಪ್ರಿಂಕೋರ್ಟ್ ಆದೇಶದ ಮಾಡಿ ವರ್ಷ ಕಳೆಯುತ್ತ ಬಂದರು, ರಾಜ್ಯ ಸರ್ಕಾರ ವರದಿ ಜಾರಿಗೆ ಮುಂದಾಗದೇ ಇರುವದನ್ನು ವಿರೋಧಿಸಿ ಪಕ್ಷಾತೀವಾಗಿ ಆ.16 ರಿಂದ 18 ವರೆಗೆ ಬೃಹತ್ ಮಟ್ಟದ ಹೋರಾಟ ಮಾಡಲು ತೀರ್ಮಾನ ಮಾಡಲಾಗಿದೆಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ನಗರದ ಖಾಸಗಿಒ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ರಚಿಸಿರುವ ನ್ಯಾ.ನಾಗಮೋಹನದಾಸ ನೇತೃತ್ವದ ಆಯೋಗ ಅವಧಿ ಪೂರ್ಣಗೊಂಡರೂ ಪೂರ್ಣ ಮಾಹಿತಿ ಇನ್ನೂ ದೊರೆಯದೇ ಹೋಗಿದೆ. ಅವರೇ ರಾಜ್ಯ ಸರ್ಕಾರ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದು ಜಾತಿವಾರು ಮಾಹಿತಿ ಕೇಳಿದರೂ ಇಂದಿಗೂ ನೀಡಿಲ್ಲ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಳ ಮೀಸಲು ಜಾರಿ ಮಾಡದಂತೆ ಕಾಂಗ್ರೆಸ್ ಆಡಳಿತ ಇರುವ ಸರ್ಕಾರಗಳಿಗೆ ಸೂಚಿಸಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ರೇವಂತರೆಡ್ಡಿಯವರು ಮಾತ್ರ ಖರ್ಗೆಯವರ ಸೂಚನೆ ಪಾಲಿಸದೇ ಜಾರಿಗೊಳಿಸಿ ನ್ಯಾಯ ಒದಗಿಸಿದ್ದಾರೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಸಮುದಾಯ ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ ಒಂದು ಬಾರಿ ಒಳ ಮೀಸಲು ಜಾರಿಗೊಳಿಸುವದಾಗಿ ಮತ್ತೊಂದು ಬಾರಿ ಬೇರೆ ಏನು ಹೇಳುತ್ತಿದ್ದಾರೆ. ಸಮುದಾಯ ಜನರ ದಾರಿತಪ್ಪಿಸುತ್ತಿರುವ ಸರ್ಕಾರವನ್ನು ಸಮಾಜ ಪ್ರತಿನಿಧಿಸುತ್ತಿರುವ ಶಾಸಕರು, ಸಂಸದರು ಸೇರಿ ಎಲ್ಲರೂ ಪ್ರಶ್ನಿಸಬೇಕಿದೆ. ರಾಜ್ಯ ಸರ್ಕಾರ ಗಮನ ಸೆಳೆಯಲು ಸಮಾಜ ಎಲ್ಲ ಸಂಘಟನೆಗಳು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಹೋರಾಟ ರೂಪಿಸಬೇಕು ಎಂದರು.

ಸಂಸತ್‌ನಲ್ಲಿ ಒಳಮೀಸಲು ಜಾರಿ ಮಾಡಲು ಸಾಧ್ಯವಿಲ್ಲ ಎಂದು ನಾನು ಹೇಳಿಲ್ಲ. ಕಾನೂನಾತ್ಮಕ ಸಮಸ್ಯೆ ಗಳಿರುವ ಕುರಿತು ಸಂಸತ್ ಗಮನಕ್ಕೆ ತರಲಾಗಿತ್ತು. ಮೀಸಲಾತಿ ಹೋರಾಟ ಪ್ರಾರಂಭಿಸಿದ್ದೇ ನಾನು ಎಂದರು.

ಚಳಿಗಾಲದ ಅಧಿವೇಶನ ಒಳಗೆ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ಮಾಡದಿದ್ದರೆ ಅಂತ ಅಂತವಾಗಿ ಹೋರಾಟ ರೂಪಿಸಬೇಕಾಗುತ್ತದೆಂದು ಎಚ್ಚರಿಸಿದರು. ಈ ಸಂದರ್ಭಲ್ಲಿ ಮಾದಿಗ ಸಮುದಾಯದ ಮುಖಂಡರಾದ ಎಸ್.ಮಾರೆಪ್ಪ, ಎಂ.ವಿರೂಪಾಕ್ಷಿ, ರವೀಂದ್ರ ಜಲ್ದಾರ, ಪಿ.ಯಲ್ಲಪ್ಪ, ನರಸಪ್ಪ ದಂಡೋರ, ಜೆ.ತಿಮ್ಮಪ್ಪ, ಭೀಮಣ್ಣ ಮಂಚಾಲ, ತಿಮ್ಮಪ್ಪ ಫಿರಂಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net