

ಸವಣೂರ: ಅಭಿವೃದ್ಧಿ ಕಾಮಗಾರಿಗಳ ಚಾಲನೆಗೆ ಸಂಸದರನ್ನು ಕಡೆಗಣಿಸುತ್ತಿರುವುದನ್ನು ವಿರೋಧಿಸಿ ಬಿಜೆಪಿ ಪದಾಧಿಕಾರಿಗಳು ಪಟ್ಟಣದ ಪುರಸಭೆ ಕಚೇರಿಗೆ ಮಂಗಳವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿರುವ ವಿಶೇಷ ಅನುದಾನದಡಿ ಪಟ್ಟಣದಲ್ಲಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಚಾಲನೆಗೆ ಕೇಂದ್ರ ಸಚಿವ, ಸಂಸದ ಪ್ರಲ್ಹಾದ ಜೋಶಿ ಅವರನ್ನು ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂಘಿಸಲಾಗಿದೆ. ತಪ್ಪಿತಸ್ಥ ಪುರಸಭೆ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಭರತರಾಜ್ ಕೆ.ಎನ್., ಅವರೊಂದಿಗೆ ವಾಗ್ವಾದ ನಡೆಸಿದರು. ತಹಸೀಲ್ದಾರ್ ಮಾತನಾಡಿ, ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಳಿಕ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ಮಂಡಳ ಅಧ್ಯಕ್ಷ ಹನುಮಂತಗೌಡ ಮುದಿಗೌಡ್ರ, ಪದಾಧಿಕಾರಿಗಳಾದ ಶ್ರೀನಿವಾಸ ಗಿತ್ತೆ, ಅಶೋಕ ಯಲಿಗಾರ, ಪುರಸಭೆ ಸದಸ್ಯರಾದ ಸದಾನಂದ ಕೆಮ್ಮಣಕೇರಿ, ಮಹೇಶ ಮುದಗಲ್, ಮಹಾದೇವ ಮಹೇಂದ್ರಕರ, ದುರಗಪ್ಪ ಗಡೆದ, ನಾಗರಾಜ ನರೆಗಲ್, ಪ್ರಮುಖರಾದ ಮಹಾಂತೇಶ ಹಾವಣಗಿ, ನರಹರಿ ಕಟ್ಟಿ, ಧರಿಯಪ್ಪಗೌಡ ಪಾಟೀಲ, ಬಸವರಾಜ ಸವೂರ, ನಾಗರಾಜ ವಾಲ್ಮೀಕಿ, ಶಂಕರ ಪಾಟೀಲ, ಶ್ರೀಕಾಂತ ಲಕ್ಷ್ಮೇಶ್ವರ, ನಿಂಗಪ್ಪ ಬಂಕಾಪೂರ, ಬಸನಗೌಡ ಪಾಟೀಲ, ಹನುಮಂತಪ್ಪ ಕಲಘಟಗಿ, ಪ್ರವೀಣ ಬಾಲೇಹೊಸೂರ, ಪ್ರಕಾಶ ಮುದಿಗೌಡ್ರ, ಮಹೇಶ ಮಲ್ಕಣ್ಣನವರ, ವಿನಾಯಕ ಕುಲಕರ್ಣಿ ಇದ್ದರು.