

ವಿಜಯವಾಣಿ ಸುದ್ದಿಜಾಲ ಧಾರವಾಡ
ತಮಿಳುನಾಡಿನ ಹೊಸೂರ ನ್ಯಾಯಾಲಯದಲ್ಲಿ ಹಾಡಹಗಲೇ ನಡೆದ ವಕೀಲ ಕಣ್ಣನ್ ಹತ್ಯೆ ಖಂಡಿಸಿ ಧಾರವಾಡ ವಕೀಲರ ಸಂಘದಿ0ದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಸಂಘದ ಸಭಾಭವನದಲ್ಲಿ ತುರ್ತು ಸಭೆ ನಡೆಸಿ ದುಷ್ಕೃತ್ಯವನ್ನು ಖಂಡಿಸಲಾಯಿತು. ಜ್ಯುಬಿಲಿ ವೃತ್ತದಲ್ಲಿ ಜಮಾವಣೆಗೊಂಡ ವಕೀಲರು ಕೆಲಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಬಳಿಕ ಜಿಲ್ಲಾಽಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ವಕೀಲರಿಗೆ ರಕ್ಷಣೆ ಮತ್ತು ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಽಕಾರಿ ಮೂಲಕ ಮುಖ್ಯಮಂತ್ರಿ, ಗೃಹಸಚಿವರಿಗೆ ಮನವಿ ರವಾನಿಸಲಾಯಿತು.
ವಕೀಲರ ಮೇಲೆ ಇತ್ತೀಚಿನ ದಿನಗಳಲ್ಲಿ ಹಲ್ಲೆ ನಡೆಯುತ್ತಿವೆ. ಮೇಲಿಂದ ಮೇಲೆ ಮಾರಾಣಾಂತಿಕ ಹಲ್ಲೆಗೈದು ಕೊಲೆ ಕೂಡ ನಡೆದಿವೆ. ವಕೀಲರ ಮೇಲೆ ನಡೆಯುತ್ತಿರುವ ಇಂಥ ಪ್ರಕರಣಗಳ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಕೀಲರು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಅಶೋಕ ಏಣಗಿ, ಪದಾಧಿಕಾರಿಗಳಾದ ಆಶಿಷ್ ಮಗದುಮ್ಮ, ಎಸ್.ಎಂ. ಹೆಬ್ಬಳ್ಳಿ , ಅಶೋಕ ದೊಡ್ಡಮನಿ, ಪ್ರಕಾಶ ಭಾವಿಕಟ್ಟಿ ಸೇರಿ ನೂರಾರು ವಕೀಲರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.