ಕಸ್ತೂರಿರಂಗನ್​ ವರದಿ ವಿರೋಧಿಸಿ ಪ್ರತಿಭಟನೆ

udp-24-protest
Published on

ಉಡುಪಿ: ಕಸ್ತೂರಿ ರಂಗನ್​ ವರದಿ ಜಾರಿಗೆ ಒತ್ತಾಯಿಸುವವರು ಆಂಗ್ಲ ಮಾಧ್ಯಮ ಮತ್ತು ವಿದೇಶಿ ಕೃಪಾಪೋಷಿತ ಪರಿಸರವಾದಿಗಳಾಗಿದ್ದಾರೆ. ಇದರ ಹಿಂದೆ ಬಹುದೊಡ್ಡ ಸಂಚು ಅಡಗಿದೆ ಎಂದು ಪರಿಸರ ಹೋರಾಟಗಾರ ಕಲ್ಕುಳಿ ವಿಠಲ ಹೆಗಡೆ ಹೇಳಿದರು.

ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿಮಂಗಳವಾರ ಜಡ್ಕಲ್​, ಮುದೂರು ಗ್ರಾಮ ಹಿತರಕ್ಷಣಾ ಸಮಿತಿ ವತಿಯಿಂದ ಕಸ್ತೂರಿ ರಂಗನ್​ ವರದಿ ವಿರೋಧಿ ಪ್ರತಿಭಟನೆಯಲ್ಲಿ ಮಾತನಾಡಿದರು.

ವರದಿಗೆ ಅನೇಕ ಬಾರಿ ವಿರೋಧ ವ್ಯಕ್ತವಾಗಿದ್ದು, ಅನೇಕ ಹೋರಾಟ ನಡೆದಿದೆ. ಇದೀಗ ಆರನೇ ಬಾರಿ ಅಧಿಸೂಚನೆ ಹೊರಡಿಸಿರುವುದನ್ನು ಗಮನಿಸಿದರೆ ವರದಿ ಜಾರಿಯಾಗಬಹುದೆಂಬ ಅನುಮಾನ ಕಾಡುತ್ತಿದೆ ಎಂದು ಹೇಳಿದರು.

ಹಿಂದೆ ಮಾಧವ ಗಾಡ್ಗೀಳ್​ ವರದಿ ಜಾರಿ ಬಗ್ಗೆ ಕೇರಳದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ನಂತರ ಅದರಲ್ಲಿರುವ ಅಂಶಗಳನ್ನೇ ಸ್ವಲ್ಪ ಬದಲಿಸಿ ಕಸ್ತೂರಿರಂಗನ್​ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು. ವಿಪ ಸದಸ್ಯ ಮಂಜುನಾಥ ಭಂಡಾರಿ, ಬೈಂದೂರು ಶಾಸಕ ಗುರುರಾಜ್​ ಗಂಟಿಹೊಳೆ, ಮಾಜಿ ಶಾಸಕ ಗೋಪಾಲ್​ ಪೂಜಾರಿ, ದೀಪಕ್​ ಕುಮಾರ್​ ಶೆಟ್ಟಿ, ವಾಸುದೇವ ಮುದೂರು ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net