

ರಾಯಚೂರು ರಾಜ್ಯ ಸರ್ಕಾರ ಮಾಡಿದ ಜಾತಿ ಗಣತಿ ಅವೈಜ್ಞಾನಿಕವಾಗಿದ್ದು, ಇದು ಒಂದು ಸಮಾಜದವನ್ನು ಖುಷಿ ಪಡಿಸಲು ಮಾಡಿದ ಗಣತಿಯಾಗಿದೆ ಈ ಕೂಡಲೇ ಗಣತಿ ಹಿಂಪಡೆಯಲು ಒತ್ತಾಯಿಸಿ ಏ.೨೮ ರಂದು ಬೃಹತ್ ಪ್ರತಿಭಟನೆಯನ್ನು ಮಾಡಲಾಗುತ್ತದೆಂದು ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಶರಣ ಭೂಪಾಲ ನಾಡಗೌಡ ತಿಳಿಸಿದರು.
ನಗರದ ಸೋಮವಾರ ಪೇಟೆ ಹಿರೇಮಠದಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ವೀರಶೈವ ಸಮಾಜದವರು ಒಟ್ಟು ೨.೫ ಕೋಟಿ ಜನಸಂಖ್ಯೆ ಹೊಂದಿದೆ. ಆದರೆ ಸರ್ಕಾರ ಮಾಡಿದ ಗಣತಿಯಲ್ಲಿ ಕೇವಲ ೬೬ ಲಕ್ಷ ಜನ ಮಾತ್ರ ತೋರಿಸಿದ್ದು ಖಂಡನೀಯವಾಗಿದೆ. ವೀರಶೈವ ಲಿಂಗಾಯತ ಸಮಾಜದ ಉಪ ಜÁತಿಗಳಾಗಿ ಚೂರು ಚೂರು ಮಾಡಿ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ.
ತಟಸ್ಥರಾದ ಸಚಿವರಿಗೆ ಸಮಾಜ ಮುಂದೆ ಪಾಠ ಕಲಿಸಲಿದೆ. ಸರ್ಕಾರ ಒಡೆದಾಳುವ ನೀತಿ ಅನುಸರಿಸುತ್ತಿದೆ. ಇದಕ್ಕೆ ತಕ್ಕ ಪಾಠ ಕಲಿಸುತ್ತೇವೆ. ಕಾಂಗ್ರೆಸï ಪಕ್ಷದ ಆಂತರಿಕ ಕಚ್ಚಾಟ ಮರೆ ಮಾಚಲು ಜÁತಿ ಗಣತಿ ವಿಷಯ ತರಲಾಗಿದೆ. ರಾಜ್ಯದಲ್ಲಿ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯ ಹೆಚ್ಚಿಗೆ ಇವೆ.ಆದರೆ ಸರ್ಕಾರ ಈ ಸಮುದಾಯವನ್ನು ಕಡಿಮೆ ಇವೆ ಎಂದು ತೋರಿಸಿದ್ದಾರೆ.
ಅಽಕಾರದ ಆಸೆಯಿಂದ ಪಂಗಡಗಳನ್ನು ಹೊಡೆದಿದ್ದಾರೆ. ಸಮಾಜದಿಂದಲೂ ಜÁತಿ ಸಮೀಕ್ಷೆ ಮಾಡವ ಉದ್ದೇಶವಿದೆ ಆದರಿಂದ ಕೂಡಲೇ ಮುಂದಿನ ಸಂಪುಟದಲ್ಲಿ ಸರ್ಕಾರ ಒಪ್ಪಿದ್ದಲ್ಲಿ ಉಗ್ರ ಹೋರಾಟ ಮಾಡುವುದರ ಜತೆಗೆ ಸರ್ಕಾರವನ್ನು ಬದಲಿಸಲಾಗುವುದು. ೨೮ ರಂದು ನಡೆಯಲಿರುವ ಹೋರಾಟದಲ್ಲಿ ಸುಮಾರು ೧೦ ಸಾವಿರಕ್ಕೂ ಅಽಕ ಜನ ಸೇರಿ ಜಿಲ್ಲಾಽಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ವೀರಭದ್ರ ಸ್ವಾಮಿಜಿ, ಕಿ¯್ಲÉÃ ಬೃಹನ್ಮಠದ ಶಾಂತಮಲ್ಲ ಸ್ವಾಮಿಜಿ, ಸೋಮವಾರ ಪೇಟೆ ಹಿರೇಮಠದ ಅಭಿನವ ರಾಚೋಟಿ ಶಿವಾಚಾರ್ಯ , ನಿಲಗಲï ಬೃಹನ್ಮಠದ ಡಾ.ಪಂಚಾಕ್ಷರಿ ಸ್ವಾಮಿಜಿ, ಸುಲ್ತಾನಪುರದ ಸೋಮನಾಥ ಸ್ವಾಮಿಜಿ, ಲಿಂಗಾಯತ ವೀರಶೈವ ಮಹಾಸಭಾದ ಜಿ¯್ಲÁಧ್ಯಕ್ಷ ಚಂದ್ರಶೇಖರ ಮಿಜÁðಪುರ, ಶಾಸಕ ಡಾ.ಶಿವರಾಜ ಪಾಟೀಲï, ಕೇಂದ್ರ ಮಾಜಿ ಸಚಿವ ಬಸವರಾಜ ಪಾಟೀಲ ಅನ್ವರಿ ಇದ್ದರು.