

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಯಾದವಾಡ, ಪುಡಕಲಕಟ್ಟಿ ಸರಹದ್ದಿನಲ್ಲಿ ಮೃಣಾಲ್ ಸಕ್ಕರೆ ಕಾರ್ಖಾನೆ ಸ್ಥಾಪನೆ ವಿರೋಽಸಿ ಯಾದವಾಡ ಗ್ರಾಮಸ್ಥರು ಜಿಲ್ಲಾಽಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಪುಡಕಲಕಟ್ಟಿ, ಯಾದವಾಡ ಗ್ರಾಮಗಳ ಸರಹದ್ದಿನಲ್ಲಿ ಮೃಣಾಲ್ ಹೆಬ್ಬಾಳಕರ್ ಮಾಲೀಕತ್ವದ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗುತ್ತಿದೆ. ಇದು ಧಾರವಾಡ, ಅಳ್ನಾವರ, ಕಲಘಟಗಿ ಭಾಗದ ಕಬ್ಬು ಬೆಳೆಗಾರರಿಗೆ ಅನುಕೂಲವಾಗಲಿದೆ. ಆದರೆ, ಗ್ರಾಮಸ್ಥರ ಆರೋಗ ಹಾಗೂ ಮಣ್ಣಿನ ಫಲವತ್ತತೆಯ ಮೇಲೆ ದುಷ್ಪರಿಣಾಮ ಬೀರಲಿದೆ. ಸಮಗ್ರ ಕೃಷಿ ಪದ್ಧತಿ, ಬಹುಬೆಳೆ ಪದ್ಧತಿಗೆ ಇದು ತದ್ದಿರುದ್ಧವಾಗಲಿದೆ. ಮೃಣಾಲ್ ಶುಗರ್ ಕಾರ್ಖಾನೆ ಸ್ಥಾಪನೆಗೆ ಸಂಬ0ಧಿಸಿ ಎನ್‌ಒಸಿ ಕೇಳಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದಾಗ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗುತ್ತಿರುವ ಬಗ್ಗೆ ಅಽಕೃತವಾಗಿ ಮಾಹಿತಿ ಸಿಕ್ಕಿದೆ. ಗ್ರಾಮಸ್ಥರ ವಿರೋಧ, ಒಮ್ಮತಾಭಿಪ್ರಾಯದ ಮೇರೆಗೆ ಗ್ರಾಮ ಪಂಚಾಯಿತಿಯಿ0ದ ಕಾರ್ಖಾನೆ ಸ್ಥಾಪನೆಗೆ ಎನ್‌ಒಸಿ ನೀಡುತ್ತಿಲ್ಲ. ಆದ್ದರಿಂದ ಜನಸಾಮಾನ್ಯರ ಹಿತದೃಷ್ಟಿಯಿಂದ ಸಕ್ಕರೆ ಕಾರ್ಖಾನೆ ಸ್ಥಾಪನೆಯನ್ನು ತಡೆಯಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಸಲಾಗುವುದು ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.