

ಕಾಗವಾಡ: ತಾಲೂಕಿನಲ್ಲಿ ಇತರ ಜಾತಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ವಾಲ್ಮೀಕಿ ಸಮುದಾಯ, ತಾಲೂಕು ಘಟಕದ ಪದಾಧಿಕಾರಿಗಳು ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ವಾಲ್ಮೀಕಿ ಸಮುದಾಯ ಅಧ್ಯಕ್ಷ ರಮೇಶ ನಾಯ್ಕ ಮಾತನಾಡಿ, ಸರ್ಕಾರದ ಆದೇಶವಿದ್ದರೂ ಬೇರೆ ಜಾತಿಯವರಿಗೆ ಅಧಿಕಾರಿಗಳು
ನಕಲಿ ಪ್ರಮಾಣ ಪತ್ರ ವಿತರಿಸುತ್ತಿದ್ದಾರೆ. ಇದರಿಂದ ನಮ್ಮ ಸಮುದಾಯದ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಈ ಕುರಿತು ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದನೆ ದೊರೆತಿಲ್ಲವಾದ್ದರಿಂದ ಹೋರಾಟ ಅನಿವಾರ್ಯ ಎಂದರು.
ವಕೀಲ ಪ್ರವೀಣ ಕೆಂಪವಾಡೆ ಮಾತನಾಡಿ, ಸ್ಥಳೀಯ ದಂಡಾಧಿಕಾರಿಗಳಿಂದ ನಕಲಿ ಪ್ರಮಾಣ ಪತ್ರ ವಿತರಿಸಲಾಗಿದೆ ಇದನ್ನು ತಡೆಯಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಕೈಗೊಳ್ಳುತ್ತೇವೆ ಎಂದರು.
ನಾಯಕ ಸಮುದಾಯದ ಉಪಾಧ್ಯಕ್ಷ ಸದಾಶಿವ ನಾಯ್ಕ, ಸಂತೋಷ ಮಗದುಮ್, ಪೀರಪ್ಪ ನಾಯ್ಕ, ಅಶೋಕ ಮಾಕನ್ನವರ, ರಮೇಶ ನಾಯ್ಕ, ರಮೇಶ ದೊಡ್ಮನಿ, ಮಹಾದೇವ ನಾಯ್ಕ, ಅಣ್ಣಪ್ಪ ಪಟಾಯತ, ಸುರೇಶ ನಾಯ್ಕ, ಪರಸು ನಾಯ್ಕ, ರಮೇಶ ಪೂಜಾರಿ, ಶಿವಲಿಂಗ ನಾಯಕ ಇತರರಿದ್ದರು.