ಜಿಲ್ಲಾಡಳಿತ ಕ್ರಮ ವಿರೋಧಿಸಿ ಪ್ರತಿಭಟನೆ

Protest against the action of the district administration
ಬಾಗಲಕೋಟೆಯಲ್ಲಿ ಪ್ರತಿಷ್ಠಾಪಿಸಿದ್ದ ಶಿವಾಜಿ ಮೂರ್ತಿ ತೆರವುಗೊಳಿಸಿದ ಜಿಲ್ಲಾಡಳಿತ ಕ್ರಮ ಖಂಡಿಸಿ ರಬಕವಿ ಬನಹಟ್ಟಿ ನಗರದಲ್ಲಿ ಹಿಂದುಪರ ಸಂಘಟನೆಗಳ ಮುಖಂಡರು ತಹಸೀಲ್ದಾರ್ ಗಿರೀಶ ಸ್ವಾದಿ ಅವರಿಗೆ ಮನವಿ ಸಲ್ಲಿಸಿದರು. ಹರೀಶ ನಾಝರೆ, ಅನೀಲ ಬರಗಡಗಿ ಇತರರಿದ್ದರು.
Published on

ರಬಕವಿ/ಬನಹಟ್ಟಿ: ಬಾಗಲಕೋಟೆ ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳದಲ್ಲಿದ್ದ ಶಿವಾಜಿ ಮೂರ್ತಿ ತೆರವುಗೊಳಿಸಿದ ಜಿಲ್ಲಾಡಳಿತ ಕ್ರಮ ಖಂಡಿಸಿ ಅವಳಿನಗರದ ಹಿಂದುಪರ ಸಂಘಟನೆಗಳು ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದವು.

ಬನಹಟ್ಟಿಯ ಈಶ್ವರಲಿಂಗ ಮೈದಾನದಿಂದ ತಾಲೂಕು ಶ್ರೀರಾಮಸೇನೆ ಕಾರ್ಯಕರ್ತರು ಹಾಗೂ ಹಿಂದು ಸಂಘಟನೆ ಮುಖಂಡರು ಪ್ರತಿಭಟನಾ ಮೆರವಣಿಗೆಯಲ್ಲಿ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಗಿರೀಶ ಸ್ವಾದಿ ಅವರಿಗೆ ಮನವಿ ಸಲ್ಲಿಸಿದರು.

ಶ್ರೀರಾಮ ಸೇನೆ ತಾಲೂಕು ಅಧ್ಯಕ್ಷ ಹರೀಶ ನಾಝರೆ ಮಾತನಾಡಿ, ನೂರಾರು ಜನ ಹಿಂದುಗಳ ಪ್ರತಿಭಟನೆ ಹತ್ತಿಕ್ಕಿ ಪೊಲೀಸ್ ಬಲ ಬಳಸಿ ಜಿಲ್ಲಾಡಳಿತ ಮೂರ್ತಿ ತೆರವುಗೊಳಿಸಿರುವುದು ಖಂಡನೀಯ. ಕೂಡಲೇ ಮೂರ್ತಿಯನ್ನು ಅದೇ ಸ್ಥಳದಲ್ಲಿ ಗೌರವಯುತವಾಗಿ ಪ್ರತಿಷ್ಠಾಪಿಸಬೇಕು. ಇಲ್ಲವಾದಲ್ಲಿ ಸಮಸ್ತ ಹಿಂದು ಸಮಾಜ ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅನೀಲ ಬರಗಡಗಿ, ಸದಾಶಿವ ಮುತ್ತೂರ, ಚೇತನ ಯಂಕಂಚಿ, ಧರೆಪ್ಪ ಉಳ್ಳಾಗಡ್ಡಿ, ಶಿವಾನಂದ ಗಾಯಕವಾಡ, ಸುರೇಶ ಅಕ್ಕಿವಾಟ, ಆನಂದ ಕಂಪು, ಪ್ರಭು ಪೂಜಾರಿ, ಶಿವಾನಂದ ಕಾಗಿ, ಅಶೋಕ ರಾವಳ, ಶಿವಾನಂದ ಬುದ್ನಿ, ಸಂಜೀವ ರಾವಳ, ವಿಠ್ಠಲ ಹೊಳೆಪ್ಪಗೋಳ, ಜಿ.ಎಸ್. ಗೊಂಬಿ, ಅರುಣ ಬುದ್ನಿ, ಸುರೇಶ ಚಿಂಡಕ, ವಿರುಪಾಕ್ಷಯ್ಯ ಮಠದ, ಮಲ್ಲಪ್ಪ ಹೊಸಮನಿ, ಬಾಬಾಗೌಡ ಪಾಟೀಲ, ಮಲಕಪ್ಪ ಬಿರಾದಾರ ಪಾಟೀಲ, ಪವಿತ್ರಾ ತುಕ್ಕನ್ನವರ, ಸುವರ್ಣ ಕೊಪ್ಪದ, ರವಿ ಜವಳಗಿ, ಸಿದ್ದನಗೌಡ ಪಾಟೀಲ, ಚಿದಾನಂದ ಹೊರಟ್ಟಿ, ಮಹಾದೇವ ಆಲಕನೂರ, ಭೀಮಸಿ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net