ಶಿಕ್ಷಕಿ ವರ್ಗಾವಣೆ ವಿರೋಧಿಸಿ ಪ್ರತಿಭಟನೆ

KUMATA PROTEST
Published on

ಕುಮಟಾ: ತಾಲೂಕಿನ ಅಳಕೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪಿನಪಟ್ಟಣ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಂಧ್ಯಾ ರಾಯ್ಕರ್ ಅವರ ವರ್ಗಾವಣೆ ವಿರೋಧಿಸಿ ಗ್ರಾಮಸ್ಥರು ಹಾಗೂ ಎಸ್​ಡಿಎಂಸಿಯವರು ಶುಕ್ರವಾರ ಶಾಲೆಗೆ ಬೀಗಹಾಕಿ ಪ್ರತಿಭಟನೆ ನಡೆಸಿದರು.

ಶಾಲೆಯಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಸಂಧ್ಯಾ ರಾಯ್ಕರ ಅವರನ್ನೇ ಹೆಚ್ಚುವರಿ ಎಂದು ಶಿಕ್ಷಣ ಇಲಾಖೆ ವರ್ಗಾವಣೆ ಮಾಡಿದೆ. ಇದು ಸರಿಯಲ್ಲ. ಅವರು ಕಳೆದ 20 ವರ್ಷಗಳಿಂದ ಮಕ್ಕಳಿಗೆ ಪಾಠದೊಂದಿಗೆ ಉತ್ತಮ ಸಂಸ್ಕಾರ ನೀಡುತ್ತಿದ್ದಾರೆ. ಅವರನ್ನು ವರ್ಗಾಯಿಸುವುದರಿಂದ ಶಾಲೆಯ ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಾರೆ. ಹೀಗಾಗಿ ಮಕ್ಕಳ ಹಿತದೃಷ್ಟಿಯಿಂದ ಅವರನ್ನು ಪುನಃ ಇದೇ ಶಾಲೆಯಲ್ಲಿ ಮುಂದುವರಿಸುವವರೆಗೆ ಶಾಲೆಯ ಬೀಗ ತೆರೆಯುವುದಿಲ್ಲ ಎಂದು ಪಟ್ಟು ಹಿಡಿದರು.

ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ ಅವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಮಕ್ಕಳನ್ನು ಶಾಲೆಯಿಂದ ಹೊರಹಾಕಿ ಬಿಸಿಯೂಟ ಸ್ಥಗಿತಗೊಳಿಸಿ ಪ್ರತಿಭಟಿಸಬೇಕಾಯಿತು ಎಂದು ಗ್ರಾಮಸ್ಥರು ಹೇಳಿದರು

ಸ್ಥಳಕ್ಕೆ ಆಗಮಿಸಿದ ಜಿಪಂ ನಿಕಟ ಪೂರ್ವ ಸದಸ್ಯ ಗಜಾನನ ಪೈ ಮಾತನಾಡಿ, ಶಿಕ್ಷಕಿ ಸಂಧ್ಯಾ ರಾಯ್ಕರ ಅವರಂತಹ ಉತ್ತಮ ಶಿಕ್ಷಕರು ಗ್ರಾಮೀಣ ಶಾಲೆಗೆ ಅವಶ್ಯಕತೆ ಇದೆ. ಈ ಬಗ್ಗೆ ಶಾಸಕ ದಿನಕರ ಶೆಟ್ಟಿ ಅವರ ಬಳಿ ರ್ಚಚಿಸಿ ಪುನಃ ಇದೇ ಶಾಲೆಗೆ ವಾಪಸು ಕರೆತರಲು ಪ್ರಯತ್ನಿಸಲಾಗುವುದು ಎಂದರು

ಗ್ರಾಮಸ್ಥರಾದ ಹರಿಶ್ಚಂದ್ರ ಗೌಡ, ನಯನ ಗೌಡ, ]ೕಧರ ಗೌಡ, ಮಾರು ಮುಕ್ರಿ, ಶಶಿಕಲಾ ಅಂಬಿಗ, ಅನಂತ ಶಾನಭಾಗ, ]ೕಧರ ಪೈ, ವಿನಾಯಕ ನಾಯ್ಕ, ಎಸ್​ಡಿಎಂಸಿಯವರು ಇದ್ದರು.

ಉಪ್ಪಿನಪಟ್ಟಣ ಶಾಲೆಯಲ್ಲಿ 84 ವಿದ್ಯಾರ್ಥಿಗಳಿದ್ದು, ಮುಖ್ಯ ಶಿಕ್ಷಕ ಸಹಿತ ನಾಲ್ವರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲಾಖೆ ನಿಯಮಾವಳಿಯಂತೆ ಶಿಕ್ಷಕಿ ಸಂಧ್ಯಾ ರಾಯ್ಕರ್ ಅವರನ್ನು ಹೆಚ್ಚುವರಿ ಶಿಕ್ಷಕರೆಂದು ಜಿಲ್ಲಾ ಮಟ್ಟದ ಸಭೆಯಲ್ಲಿ ಪರಿಗಣಿಸಿ ಭಟ್ಕಳಕ್ಕೆ ವರ್ಗಾಯಿಸಲಾಗಿದೆ. ಅವರು ವರ್ಗಾವಣೆಗೊಂಡ ಶಾಲೆಗೆ ಕರ್ತವ್ಯಕ್ಕೆ ಹೋಗಲೇಬೇಕಾಗುತ್ತದೆ. ಹೆಚ್ಚೆಂದರೆ ಉಪ್ಪಿನಪಟ್ಟಣ ಶಾಲೆಗೆ ಪರ್ಯಾಯವಾಗಿ ಅತಿಥಿ ಶಿಕ್ಷಕರೊಬ್ಬರನ್ನು ಒದಗಿಸಬಹುದು. | ರಾಜೇಂದ್ರ ಭಟ್, ಬಿಇಒ ಕುಮಟಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net