

ಗೋಕಾಕ: ಬೆಲೆ ಏರಿಕೆ, ತೆರಿಗೆ ಹೆಚ್ಚಳ ಮಾಡಿರುವುದನ್ನು ಹಿಂಪಡೆಯಬೇಕು. ಅಲ್ಪಸಂಖ್ಯಾತರಿಗೆ ಸಂವಿಧಾನ ಬಾಹೀರವಾಗಿ ನೀಡಿದ ಕಾಮಗಾರಿಗಳ ಮೀಸಲಾತಿ ಆಕ್ಷೇಪಿಸಿ, ಎಸ್‌ಸಿ, ಎಸ್‌ಟಿ ಮೀಸಲು ಹಣದ ದುರ್ಬಳಕೆ ಖಂಡಿಸಿ ಮತ್ತು ಬಿಜೆಪಿಯ 18 ಶಾಸಕರ ಅಮಾನತು ವಿರೋಧಿಸಿ ಇಲ್ಲಿನ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲದ ವತಿಯಿಂದ ಪ್ರತಿಭಟಿಸಿ, ತಹಸೀಲ್ದಾರಗೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ಗೋಕಾಕ ನರಗ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನರಗಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಮುಖಂಡರಾದ ಲಕ್ಷ್ಮಣ ತಪಸಿ, ಅಬ್ಬಾಸ ದೇಸಾಯಿ, ಶಕೀಲ ಧಾರವಾಡಕರ, ಲಕ್ಕಪ್ಪ ತಹಶೀಲ್ದಾರ, ಬಸವರಾಜ ಆರೆನ್ನವರ, ಬಸವರಾಜ ಮಾಳಗಿ, ಬಾಬು ಮುಳಗುಂದ, ಲಕ್ಷ್ಮಣ ತಳ್ಳಿ, ಸುರೇಶ ಪತ್ತಾರ, ಮಂಜುನಾಥ ಮಾವರಕರ, ವೀರೇಂದ್ರ ಯಕ್ಕೇರಿಮಠ ಇತರರಿದ್ದರು.