ತಲಪಾಡಿ ಟೋಲ್‌ಗೇಟ್ ವಿರುದ್ಧ ಪ್ರತಿಭಟನೆ

New Project (5)
Published on

ಮಂಜೇಶ್ವರ: ತಲಪಾಡಿ ಟೋಲ್‌ಗೇಟ್ ತಾರತಮ್ಯ ನೀತಿ ಹಾಗೂ ಸಿಬ್ಬಂದಿಯ ಗೂಂಡಾಗಿರಿ ವಿರೋಧಿಸಿ ಮಂಜೇಶ್ವರ ಟೋಲ್‌ಗೇಟ್ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಬುಧವಾರ ಸಂಜೆ ತಲಪಾಡಿ ಟೋಲ್‌ಗೇಟ್‌ಸಮೀಪ ಬೃಹತ್ ಪ್ರತಿಭಟನಾ ಧರಣಿ ನಡೆಯಿತು.

ತಲಪಾಡಿ ಟೋಲ್‌ಗೇಟ್ ಆರಂಭದಲ್ಲಿ ಕೇರಳ ಕರ್ನಾಟಕದ ಸ್ಥಳೀಯ 5 ಕಿ.ಮೀ. ವ್ಯಾಪ್ತಿಯ ನಿವಾಸಿಗಳಿಗೆ ಟೋಲ್‌ನಿಂದ ವಿನಾಯಿತಿ ನೀಡಲಾಗುತ್ತಿತ್ತು. ಆದರೆ ಕ್ರಮೇಣ ಇದು ಕೇವಲ ಕರ್ನಾಟಕದ ಸ್ಥಳೀಯರಿಗೆ ಮಾತ್ರ ಸೀಮಿತವಾಗಿ ಕೇರಳದವರಿಗೆ ವಿನಾಯಿತಿ ರದ್ದು ಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಟೋಲ್‌ಗೇಟ್ ಕ್ರಿಯಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ತಲಪಾಡಿ ಮರಿಯಾಶ್ರಮ ಚರ್ಚ್‌ನ ಉಪಾಧ್ಯಕ್ಷೆ ಲೀನಾ ಡಿಕೋಸ್ಟ ಪ್ರತಿಭಟನೆಗೆ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ ಅಧ್ಯಕ್ಷತೆ ವಹಿಸಿದರು. ನೇತಾರರಾದ ಮುನೀರ್ ಕಾಟಿಪಳ್ಳ, ಬಿ.ವಿ.ರಮೇಶ, ಡಿಎಂಕೆ ಮೊಹಮ್ಮದ್, ಸೈಪುಲ್ಲ ತಂಙಲ್, ಶೆರೀಪ್ ಪಾವೂರು, ಸಿದ್ದೀಖ್ ತಲಪಾಡಿ, ಎಸ್.ಎಂ.ಬಶೀರ್, ಅಬ್ದುಲ್ ಸಲಾಂ ಉಚ್ಚಿಲ್, ಅಶ್ರಫ ಬಡಾಜೆ, ಹಿದಾಯತುಲ್ಲ, ರಹೀಮ್ ಉಚ್ಚಿಲ್, ಮಹಮ್ಮದಲಿ ಗುಡ್ಡೆ, ಬಶೀರ್ ಕನಿಲ ಮೊದಲಾದವರು ಮಾತನಾಡಿದರು.

ಪ್ರತಿಭಟನೆಯಲ್ಲಿ ಟೋಲ್‌ಗೇಟ್ ಕ್ರಿಯಾ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು, ಜನಪ್ರತಿನಿಧಿಗಳು ವಿವಿಧ ರಾಜಕೀಯ ಹಾಗೂ ಸಾಮಾಜಿಕ ಸಂಘಟನೆಗಳ ನೇತಾರರು, ವಿವಿಧ ಕ್ಲಬ್‌ಗಳ ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡರು. ಕ್ರಿಯಾ ಸಮಿತಿ ಕನ್ವೀನರ್ ಅಬ್ದುಲ್ ರಹೀಂ ಸ್ವಾಗತಿಸಿದರು. ಹಸೈನಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net