ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಪ್ರತಿಭಟನೆ

Protest against Suhas Shetty murder
ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿ ತೇರದಾಳದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದು ಪರ ಸಂಘಟನೆಯವರು ಪ್ರತಿಭಟನೆ ನಡೆಸಿದರು. ಶಾಸಕ ಸಿದ್ದು ಸವದಿ, ಸಂಜಯ ತೆಗ್ಗಿ, ಗೌರಿ ಮಿಳ್ಳಿ, ಸವಿತಾ ಹೊಸೂರ, ವಿರುಪಾಕ್ಷಯ್ಯ ಮಠದ ಮತ್ತಿತರರಿದ್ದಾರೆ.
Published on

ರಬಕವಿ-ಬನಹಟ್ಟಿ : ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ತೇರದಾಳ ವಿಧಾನ ಸಭಾ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಮಂಗಳೂರಿನಲ್ಲಿ ಗುರುವಾರ ರಾತ್ರಿ ಜನದಟ್ಟಣೆ ಇರುವ ಸ್ಥಳದಲ್ಲಿಯೇ ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಇದು ರಾಜ್ಯ ಸರ್ಕಾರದ ರಕ್ಷಣಾ ವೈಲ್ಯ ಎಂದು ಆರೋಪಿಸಿ ನಗರದ ಹಳೇ ಬಸ್ ನಿಲ್ದಾಣ ಹೊರವಲಯದಲ್ಲಿ ಮಾನವ ಸರಪಳಿ ನಿರ್ಮಿಸಿ ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಲಾಯಿತು.

ಶಾಸಕ ಸಿದ್ದು ಸವದಿ ಮಾತನಾಡಿ, ಹಿಂದುಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆಗಳಿಗೆ ಸರ್ಕಾರವೇ ನೇರ ಹೊಣೆ. ಹಿಂದುಗಳ ಮೇಲಿನ ದೌರ್ಜನ್ಯವನ್ನು ನಾವು ಖಂಡಿಸುತ್ತೇವೆ. ಹೋರಾಟಕ್ಕೆ ಕರೆ ಕೊಟ್ಟಾಗ ಹಿಂದುಗಳು ಒಂದಾಗಿ ಹೋರಾಟ ನಡೆಸಬೇಕು ಎಂದರು.

ಸಂಜಯ ತೆಗ್ಗಿ, ವಿರುಪಾಕ್ಷಯ್ಯ ಮಠದ, ಶ್ರೀಶೈಲ ಬೀಳಗಿ, ಮಹಾದೇವ ಕೋಟ್ಯಾಳ, ಮಹಾದೇವ ದೂಪದಾಳ, ಬಸವರಾಜ ತೆಗ್ಗಿ, ಬಾಬು ಗಂಗಾವತಿ, ವಿದ್ಯಾ ಧಬಾಡಿ, ಶಿವಾನಂದ ಗಾಯಕವಾಡ, ವೈಷ್ಣವಿ ಬಾಗೇವಾಡಿ, ಸವಿತಾ ಹೊಸೂರ, ಗೌರಿ ಮಿಳ್ಳಿ, ರವಿ ಕೊರ್ತಿ, ಶಂಕರ ಹುನ್ನೂರ, ಆನಂದ ಕಂಪು, ಶ್ರೀಶೈಲ ಗಸ್ತಿ, ಸುರೇಶ ಅಕ್ಕಿವಾಟ, ಪುಂಡಲಿಕ ಪಾಲಬಾಂವಿ, ಶಿವಾನಂದ ಬುದ್ನಿ, ಅಶೋಕ ರಾವಳ, ಯಲ್ಲಪ್ಪ ಕಟಗಿ, ಅರುಣ ಬುದ್ನಿ, ಬಸವರಾಜ ಅಮ್ಮಣಗಿಮಠ, ಬಾಬು ಗಂಗಾವತಿ, ಬಾಬು ಮಹಾಜನ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net