ಗಡಿ ಕ್ಯಾತೆ ತಗೆದು ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟ ಶಿವಸೇನೆ ಕೃತ್ಯ ಖಂಡಿಸಿ ಹಾವೇರಿಯಲ್ಲಿ ಪ್ರತಿಭಟನೆ

Haveri Protest 31 DEC 19
Published on

ಹಾವೇರಿ: ಗಡಿ ಕ್ಯಾತೆ ತಗೆದು ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟ ಶಿವಸೇನೆ ಕೃತ್ಯವನ್ನು ಖಂಡಿಸಿ ಹಾವೇರಿಯಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ‌ ನಡೆಸಲಾಯಿತು.

ನಗರದ ಕನಕದಾಸ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ಶಿವಸೇನೆ ವಿರುದ್ಧ ಘೋಷಣೆ ಕೂಗಿದರು.ಮಹಾರಾಷ್ಟ್ರ ಏಕೀಕರಣ ಸಮಿತಿ, ಸಂಘಟನೆಯನ್ನು ಕೆಂದ್ರ ಮತ್ತು ರಾಜ್ಯಸರ್ಕಾರಗಳು ನಿಷೇಧಿಸಬೇಕು,ದೇಶದಲ್ಲಿ ಶಾಂತಿ ನೆಲೆಸುವಂತೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಎಐಸಿಸಿ ಮೇಲೆ ಒತ್ತಡ ಹೇರಿ ಮಹಾರಾಷ್ಟ್ರದಲ್ಲಿ ಶಿವಸೇನೆಗೆ ನೀಡಿರುವ ಬೆಂಬಲ ಹಿಂಪಡೆಯಬೇಕು.ಇಲ್ಲವಾದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ದೂಳಿಪಟವಾಗುವ ನಿಟ್ಟಿನಲ್ಲಿ ಕರವೇ ಪ್ರಮುಖ ಪಾತ್ರವಹಿಸಲಿದೆ ಎಂದು ಎಚ್ಚರಿಕೆ ನೀಡಿದರು.

ಇನ್ನೂ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಮರಾಠಿಗರ ಸ್ವತ್ತು ಇಲ್ಲಿ ಮರಾಠಿಗನನ್ನು ಗೆಲ್ಲಿಸುತ್ತೇನೆ ಎಂದು ಶಾಸಕ ರಮೇಶಕುಮಾರ ಹೇಳಿಕೆ ನೀಡಿರೋದು ನಾಚಿಕೆಗೇಡಿನ ಕೆಲಸ.ರಮೇಶ್ ಜಾರಕಿಹೊಳಿ ಕನ್ನಡಿಗರಲ್ಲಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net