ಪಿಎಸ್‌ಐ ವಿರುದ್ಧ ಪ್ರತಿಭಟನೆ

protest against psi kustagi people koppal
ಕುಷ್ಟಗಿಯ ರವಿಕುಮಾರ ಹಿರೇಮಠ ಹಾಗೂ ಬೆಂಬಲಿಗರು ಪಿಎಸ್‌ಐ ಮುದ್ದುರಂಗಸ್ವಾಮಿ ವಿರುದ್ಧ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
Published on

ಕೊಪ್ಪಳ (ಕುಷ್ಟಗಿ):ತಮ್ಮ ಮಗನಿಗೆ ಪಿಎಸ್‌ಐ ಮುದ್ದುರಂಗಸ್ವಾಮಿ ಕಪಾಳಕ್ಕೆ ಹೊಡೆದಿದ್ದಲ್ಲದೆ ಬೂಟುಗಾಲಿನಿಂದ ಒದ್ದಿದ್ದಾರೆಂದು ಆರೋಪಿಸಿ ಪಟ್ಟಣದ ಜಂಗಮ ಸಮುದಾಯದ ಮುಖಂಡ ರವಿಕುಮಾರ ಹಿರೇಮಠ ಹಾಗೂ ಬೆಂಬಲಿಗರು ಶುಕ್ರವಾರ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಎಳನೀರು ತರಲೆಂದು ರಸ್ತೆ ಪಕ್ಕ ಬೈಕ್ ನಿಲ್ಲಿಸಿದ್ದ ಮಗ ನಂದೀಶ್‌ನನ್ನು ಠಾಣೆಗೆ ಕರೆದೊಯ್ದು ಥಳಿಸಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸಿದ್ದರೆ ಬುದ್ದಿವಾದ ಹೇಳಿ ದಂಡ ವಿಧಿಸಬಹುದಿತ್ತು.

ಮನಬಂದಂತೆ ವರ್ತಿಸಿರುವ ಪಿಎಸ್‌ಐ ಮುದ್ದುರಂಗಸ್ವಾಮಿಯನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ರವಿಕುಮಾರ್ ಹಿರೇಮಠ ಹಾಗೂ ಬೆಂಬಲಿಗರು ಆಗ್ರಹಿಸಿದರು. ಪ್ರತಿಭಟನೆ ವೇಳೆ ನೂರಾರು ಬೆಂಬಲಿಗರು ಪಿಎಸ್‌ಐ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಂದೀಶ್ ಎನ್ನುವ ಯುವಕ ಬೈಕ್‌ನ ಸೈಲನ್ಸರ್ ಕಿತ್ತು ಶಬ್ದ ಮಾಡುತ್ತ ಓಡಾಡುತ್ತಿರುವುದು ಗಮನಕ್ಕೆ ಬಂದು ಆತನಿಗೆ ಬುದ್ದಿವಾದ ಹೇಳಿದ್ದೇನೆಯೇ ಹೊರತು ಯಾವುದೇ ರೀತಿ ಥಳಿಸಿಲ್ಲ ಎಂದು ಪಿಎಸ್‌ಐ ಮುದ್ದುರಂಗಸ್ವಾಮಿ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net