ನೆಲಮಂಗಲ ತಹಸೀಲ್ದಾರ್​ ವಿರುದ್ಧ ಪ್ರತಿಭಟನೆ

03 04 2025_BGR RURAL_PAGE_3
ವಿವಿಧ ಬೇಡಿಕೆ ಈಡೇಸುವಂತೆ ಒತ್ತಾಯಿಸಿ ನೆಲಮಂಗಲ ತಾಲೂಕು ಕಚೇರಿ ಬಳಿ ರಾಷ್ಟ್ರೀಯ ಕಿಸಾನ್​ ಸಂದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ರಾಜ್ಯಾಧ್ಯಕ್ಷ ಜಯಕುಮಾರ್​, ಎಸ್​.ಕೆ.ಆನಂದ್​, ಪದಾಧಿಕಾರಿಗಳಾದ ಭಾಗ್ಯಮ್ಮ, ಜಯರಾಮಯ್ಯ, ಪದ್ಮಯ್ಯ, ಗಣೇಶ್​ ರಾವ್​, ಚಂದ್ರಶೇಖರ್​ ಮತ್ತಿತರರು ಉಪಸ್ಥಿತರಿದ್ದರು.
Published on

ನೆಲಮಂಗಲ: ರೈತರು ಹಾಗೂ ಸಾರ್ವಜನಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಕಿಸಾನ್​ ಸಂದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ತಾಲೂಕು ಕಚೇರಿ ಮುಂಭಾಗದಲ್ಲಿ ರಾಷ್ಟ್ರೀಯ ಕಿಸಾನ್​ ಸಂದ ನೇತೃತ್ವದಲ್ಲಿ ಸಮಾವೇಶಗೊಂಡ ನೂರಾರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಜನರ ಸಮಸ್ಯೆಗೆ ಸ್ಪಂದಿಸುವಲ್ಲಿ ತಾಲೂಕು ಆಡಳಿತ ಸಂಪೂರ್ಣ ವಿಫಲರಾಗಿದೆ ಎಂದು ತಹಸೀಲ್ದಾರ್​ ವಿರುದ್ಧ ೂಷಣೆ ಕೂಗಿ ಆಕ್ರೋಶ ಹೊರಹಾಕಿದರು.

ರಾಷ್ಟ್ರೀಯ ಕಿಸಾನ್​ ಸಂದ ಅಧ್ಯಕ್ಷ ಭೀಮಯ್ಯ ಮಾತನಾಡಿ, ರೈತರು ಜಮೀನು ವಿಚಾರವಾಗಿ ತಹಸೀಲ್ದಾರ್​ ಕಚೇರಿಗೆ ಅರ್ಜಿ ನೀಡಿ ವರ್ಷಗಳೇ ಕಳೆದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ತಡರಾತ್ರಿಯಲ್ಲಿ ತಹಸೀಲ್ದಾರ್​ ಕೆಲ ದಾಖಲೆಗಳಿಗೆ ಸಹಿ ಮಾಡುತ್ತಿದ್ದಾರೆ. ತಾಲೂಕಿನ ಸರ್ಕಾರಿ ಆಸ್ತಿ ರಕ್ಷಣೆ ವಿಚಾರವಾಗಿ ಸಾಕಷ್ಟು ಮನವಿ ಮಾಡಿದರೂ ಸ್ಪಂದಿಸಿಲ್ಲ. ಅಧಿಕಾರಿಗಳು ಲಂಚದ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದರೂ ತಹಸೀಲ್ದಾರ್​ ಕಣ್ಣುಮುಚ್ಚಿ ಕುಳಿತಿದ್ದಾರೆ. ತಹಸೀಲ್ದಾರ್​ ವಿರುದ್ಧ ಈ ಹಿಂದೆ ಪ್ರತಿಭಟನೆ ಮಾಡಲಾಗಿದೆ. ರೈತರು ಹಾಗೂ ಸಾರ್ವಜನಿಕರ 20ಕ್ಕೂ ಹೆಚ್ಚು ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದರು.

ಸಾಕ್ಷಿ ನೀಡಿದರೆ ಕ್ರಮ : ದೇವರ ದಾಸಿಮಯ್ಯ ಜಯಂತಿ ಹಿನ್ನೆಲೆಯಲ್ಲಿ ತಾಲೂಕು ಕಚೇರಿಗೆ ಭೇಟಿ ನೀಡಿದ್ದ ಶಾಸಕ ಎನ್​.ಶ್ರೀನಿವಾಸ್​ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಗಮನಿಸಿ ಸಮಸ್ಯೆಗಳನ್ನು ಆಲಿಸಿದರು. ೇತ್ರದಲ್ಲಿ ಅಧಿಕಾರಿಗಳು ಪಾರದರ್ಶಕ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳ ಲಂಚ ಬೇಡಿಕೆ ಹಾಗೂ ಕಿರುಕುಳಕ್ಕೆ ಸಂಬಂಧಪಟ್ಟ ಸಾ ನೀಡಿದಲ್ಲಿ ಅಂತಹ ಅಧಿಕಾರಿಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಶಾಸಕ ಎನ್​.ಶ್ರೀನಿವಾಸ್​ ತಿಳಿಸಿದರು. ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು, ದಯವಿಟ್ಟು ದಯಾಮರಣ ಕೊಡಿಸಿ ಎಂದು ಶಾಸಕರ ಮುಂದೆ ರೈತರ ಮುಖಂಡರೊಬ್ಬರು ಕಣ್ಣೀರಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net