

ಹುಬ್ಬಳ್ಳಿ: ಖಾಸಗಿ ಕಾಲೇಜೊಂದರ ಎಂಸಿಎ ವಿದ್ಯಾರ್ಥಿನಿ ನೇಹಾ ನಿರಂಜನಯ್ಯ ಹಿರೇಮಠ (23) ಕೊಲೆ ಪ್ರಕರಣದಿಂದ ನಗರದಲ್ಲಿ ಆಕ್ರೋಶ ಭುಗಿಲೆದ್ದಿದೆ. ಶುಕ್ರವಾರ ಬೆಳಗ್ಗೆ ವಿದ್ಯಾನಗರದ ಕಾಲೇಜ್ ಬಳಿ ಸೇರಿದ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಸುಮಾರು ಎರಡು ತಾಸು ರಸ್ತೆ ಸಂಚಾರ ತಡೆದು ಕೊಲೆಗಾರನ ವಿರುದ್ಧ ಘೋಷಣೆ ಕೂಗಿದರು. ನೇಹಾ ಹಿರೇಮಠಗೆ ನ್ಯಾಯ ಸಿಗಬೇಕು. ಕೊಲೆ ಮಾಡಿದ ಯುವಕನನ್ನು ಎನ್ಕೌಂಟರ್ ಮಾಡಬೇಕು ಇಲ್ಲವೇ ಗಲ್ಲು ಶಿೆಗೆ ಗುರಿ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಎಂಸಿಎ ವಿಭಾಗದಲ್ಲಿಯೇ ಹಳೇ ವಿದ್ಯಾಥಿರ್ಯಾಗಿದ್ದ ಫಯಾಜ್ ಎಂಬಾತ ನೇಹಾಳ ಹಿಂದೆ ಬಿದ್ದು ಪ್ರೀತಿಸುವಂತೆ ಪೀಡಿಸುತ್ತಿದ್ದ. ಪ್ರೀತಿ ಮಾಡಲು ನಿರಾಕರಿಸಿದ ನೇಹಾಳನ್ನು ಗುರುವಾರ ಮಧ್ಯಾಹ್ನ ಕಾಲೇಜ್ ಕ್ಯಾಂಪಸ್ನಲ್ಲಿಯೇ ಚಾಕು ಇರಿದು ಕೊಲೆ ಮಾಡಿದ್ದ.
ಘಟನೆ ನಂತರ ಸಂಜೆಯೇ ಸಾಂಕೇತಿಕ ಪ್ರತಿಭಟನೆ ನಡೆಸಿ ಸೂಕ್ತ ತನಿಖೆಗೆ ಆಗ್ರಹಿಸಿದ್ದ ಎಬಿವಿಪಿ ಕಾರ್ಯಕರ್ತರು ಶುಕ್ರವಾರ ಬೆಳಗ್ಗೆ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿದರು.
ವಿದ್ಯಾನಗರದಲ್ಲಿ ಪ್ರತಿಭಟನೆ ಮಾಡಿದ್ದರಿಂದ ಅವಳಿನಗರ ಮಧ್ಯದ ಮಾರ್ಗ ತಾಸುಗಟ್ಟಲೇ ಬಂದ್ ಆಗಿತ್ತು.
ಕರ್ನಾಟಕ ದಲಿತ ವಿಮೋಚನಾ ಸಮಿತಿ ವತಿಯಿಂದಲೂ ಪ್ರತಿಭಟನೆ ನಡೆಸಲಾಯಿತು. ಪುಂಡ ರೌಡಿಗಳಿಂದ ವಿದ್ಯಾಥಿರ್ನಿಯರನ್ನು ರಸಬೇಕು. ಅಮಾನವೀಯ ಕೊಲೆ ಮಾಡಿದ ಯಾಜ್ನನ್ನು ಗಲ್ಲಿಗೇರಿಸಬೇಕು, ನೇಹಾ ಹಿರೇಮಠ ಸಾವಿಗೆ ನ್ಯಾಯ ಕೊಡಬೇಕು ಎಂದು ಆಗ್ರಹಿಸಿದರು.
ಗೃಹಸಚಿವರ ಹೇಳಿಕೆ ಖಂಡನೀಯ:
ನೇಹಾ ಹಿರೇಮಠ ಕೊಲೆ ಆಕಸ್ಮಿಕವೆಂದು ಗೃಹ ಸಚಿವರು ನೀಡಿರುವ ಹೇಳಿಕೆಯು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಹಿಂದು ಪರ ಸಂಘಟನೆ ಮತ್ತು ಬಿಜೆಪಿ ಕಾರ್ಯಕರ್ತರು ಹುಬ್ಬಳ್ಳಿಯ ವೀರಾಪುರ ರಸ್ತೆ ಎರಡೆತ್ತಿನಮಠ ಬಳಿ ನೇಹಾಳ ಪ್ರಾರ್ಥೀವ ಶರೀರ ಇಟ್ಟು ಕೆಲ ಹೊತ್ತು ಪ್ರತಿಭಟನೆ ನಡೆಸಿದರು. ಶಾಸಕ ಮಹೇಶ ಟೆಂಗಿನಕಾಯಿ ಇತರರು ಪಾಲ್ಗೊಂಡಿದ್ದರು.