ಮುಧೋಳದಲ್ಲಿ ಶಾಸಕ ಯತ್ನಾಳ ವಿರುದ್ಧ ಪ್ರತಿಭಟನೆ

Protest against MLA Yatna in Mudhol
ಮುಧೋಳದಲ್ಲಿ ಮುಸ್ಲಿಮರು ಬಸವೇಶ್ವರ ವತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.
Published on

ಮುಧೋಳ: ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಖಂಡಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಮುಸ್ಲಿಮರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಗುರುವಾರ ಹಮ್ಮಿಕೊಂಡಿದ್ದ ನಗರದ ಜನತಾ ಪ್ಲಾಟ್ ಗಣೇಶ ವಿಸರ್ಜನೆ ವೇಳೆ ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ಅವರನ್ನು ನಿಂದಿಸಿದ್ದನ್ನು ಖಂಡಿಸಿ ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು.

ದಿಢೀರನೆ ರಸ್ತೆ ತಡೆದು ಯತ್ನಾಳ ವಿರುದ್ಧ ಧಿಕ್ಕಾರ ಕೂಗಿದರು. ಶಾಸಕರ ಭಾವಚಿತ್ರಕ್ಕೆ ಪಾದರಕ್ಷೆಯಿಂದ ಹೊಡೆದು ಆಕ್ರೋಶ ಹೊರಹಾಕಿದರು. ಯತ್ನಾಳ ವಿರುದ್ಧ ಪ್ರಕರಣ ದಾಖಸಿ ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸಿದರು. ಕೆಲ ಹೊತ್ತು ಪ್ರತಿಭಟನಾಕಾರರು ಮತ್ತು ಪೊಲೀಸ್ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು.

ನಗರದಲ್ಲಿ ಶುಕ್ರವಾರ ಸಂತೆ ಇದ್ದಿದ್ದರಿಂದ ಸಾರ್ವಜನಿಕರು ರಸ್ತೆ ತಡೆಯಿಂದ ತೊಂದರೆ ಅನುಭವಿಸಿದರು. ಡಿವೈಎಸ್ಪಿ ಈ.ಶಾಂತವೀರ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿ ಹೋರಾಟ ಹಿಂಪಡೆಯುವಂತೆ ಮಾಡಿದರು. ಸಿಪಿಐ ಮಹಾದೇವ ಶಿರಹಟ್ಟಿ, ಪಿಎಸ್‌ಐ ಅಜಿತಕುಮಾರ ಹೊಸಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net