ಬಿ.ಎಸ್.ಯಡಿಯೂರಪ್ಪ ಕುರಿತು ಟೀಕೆ: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬಿಎಸ್ವೈ ಅಭಿಮಾನಿಗಳ ಪ್ರತಿಭಟನೆ

Protest against MLA Basavaraj Patil Yatnal mandya
Published on

ಮಂಡ್ಯ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದುರ್ವರ್ತನೆ ತೋರುತ್ತಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಬಿಎಸ್‌ವೈ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.

ಕೇಂದ್ರ ಅಂಚೆ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಪತ್ರ ರವಾನಿಸಿದರು.

ಬಿಎಸ್‌ವೈ ಅವರನ್ನು ಶಕುನಿ ಎಂದು ಟೀಕೆ ಮಾಡಿರುವ ಯತ್ನಾಳ್‌ಗೆ ಪಕ್ಷದ ವರಿಷ್ಠರು ಸೂಕ್ತ ತಿಳಿವಳಿಕೆ ಹೇಳಬೇಕು. ಇಲ್ಲದಿದ್ದರೆ ಅವರನ್ನು ಸರಿದಾರಿಗೆ ತರಲು ಯಡಿಯೂರಪ್ಪರ ಅನುಯಾಯಿಗಳಿಗೆ ಅವಕಾಶ ನೀಡಬೇಕು. ಯತ್ನಾಳ್ ವರ್ತನೆಯಿಂದ ಲೋಕಸಭಾ ಚುನಾವಣೆ ಮೇಲೆ ಹೊಡೆತ ಬೀಳಲಿದೆ. ಶಿಸ್ತಿನ ಪಕ್ಷವಾಗಿರುವುದರಿಂದ ಸಹಿಸಿಕೊಂಡು ಬಂದಿದ್ದೇವೆ. ಇಂತಹ ವರ್ತನೆ ಮರುಕಳಿಸದಂತೆ ತುರ್ತು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಬಿಎಸ್‌ವೈ ಅಭಿಮಾನಿಗಳಾದ ಎಸ್.ಶಿವಕುಮಾರ್ ಆರಾಧ್ಯ, ಸಾತನೂರು ಯೋಗೇಶ್, ಎಂ.ಎಸ್.ನಂದೀಶ್, ಹೊಸಹಳ್ಳಿ ಶಿವು, ಎಚ್.ಕೆ.ಮಂಜುನಾಥ್, ಸಿ.ಎಂ.ವಿಜಯಕುಮಾರ್, ಎಸ್.ಕೆ.ನಾಗರಾಜು, ರೇವ ನಂಜುಂಡಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net