ಶಿಕ್ಷಕರ ಸಮೂಹಿಕ ವರ್ಗಾವಣೆ ವಿರೋಧಿಸಿ ಪ್ರತಿಭಟನೆ

gan (7)
Published on

ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವಾವಿನಕಟ್ಟೆ ಪ್ರೌಢಶಾಲೆಯ ಶಿಕ್ಷಕರ ಸಾಮೂಹಿಕ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬುಧವಾರ ಪ್ರತಿಭಟಿಸಿದರು. ಮಕ್ಕಳ ಪಾಲಕರೂ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ವಾವಿನಕಟ್ಟೆ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲ 9 ಮಂದಿ ಶಿಕ್ಷಕರನ್ನು ಕೊಲ್ಲೂರು ದೇಗುಲದ ಅಧೀನದ ವಿವಿಧ ಶಾಲೆಗಳಿಗೆ ವರ್ಗಾವಣೆ ವಾಡಿ, ಇಲ್ಲಿಗೆ ಬೇರೆ ಶಾಲೆಗಳಿಂದ ಶಿಕ್ಷಕರನ್ನು ನಿಯೋಜಿಸಿದ್ದಾರೆ. ಇದರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗಲಿದೆ ಎಂದು ವಿದ್ಯಾರ್ಥಿಗಳು ದೂರಿದರು. ಸತತ 10 ವರ್ಷಗಳಿಂದ ಶಾಲೆಗೆ ಶೇ.100 ಫಲಿತಾಂಶ ಬಂದಿದೆ. ಶಾಲೆ ಚೆನ್ನಾಗಿರುವ ಕಾರಣಕ್ಕೆ ಇಲ್ಲಿಗೆ ಸೇರಿಸಿದ್ದೇವೆ. ಮುಖ್ಯ ಶಿಕ್ಷಕರ ಸಹಿತ 9 ಮಂದಿ ಶಿಕ್ಷಕರನ್ನು ಏಕಾಏಕಿ ಬೇರೆ ಕಡೆಗೆ ವರ್ಗಾವಣೆ ವಾಡಿದ್ದಾರೆ. ಇಲ್ಲಿದ್ದ 10ರಿಂದ 15 ವರ್ಷ ಅನುಭವಿ ಶಿಕ್ಷಕರನ್ನು ಬೇರೆಡೆಗೆ ವರ್ಗಾಯಿಸಿದ್ದು ಸರಿಯಲ್ಲ. ಅರ್ಧದಷ್ಟು ವರ್ಗಾವಣೆ ವಾಡಲಿ. ಆದರೆ ಎಲ್ಲರನ್ನೂ ವರ್ಗಾಯಿಸಿದ್ದು ಸರಿಯಲ್ಲ. ಕನಿಷ್ಠ ಮೂವರು ಶಿಕ್ಷಕರನ್ನಾದರೂ ಉಳಿಸಬೇಕೆಂಬ ಬೇಡಿಕೆ ಇಟ್ಟಿದ್ದೇವೆ. ಸಮಸ್ಯೆ ಬಗೆಹರಿಸಲು ಮೂರು ದಿನಗಳ ಗಡುವು ನೀಡಿದ್ದು, ಪರಿಹರಿಸದಿದ್ದರೆ ಮತ್ತೆ ಹೋರಾಟ ವಾಡಲಾಗುವುದು ಎಂದು ಪಾಲಕರಾದ ಚಂದ್ರ ಬೋವಿ, ಸುಂದರ್ ಬಾಯರ್ ಎಚ್ಚರಿಕೆ ನೀಡಿದರು. ಕೊಲ್ಲೂರು ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ ಅವರಿಗೆ ದೂರವಾಣಿ ಮೂಲಕ ಸಮಸ್ಯೆ ಬಗ್ಗೆ ತಿಳಿಸಿದ್ದು, ಕೂಡಲೇ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಊರ ಹಿರಿಯ ಮುಂದಾಳು ಜಿ.ಎಂ.ಚೆರಿಯಬ್ಬ ಸಾಹೇಬ್ ಹೇಳಿದರು.

ಮಕ್ಕಳು, ಪಾಲಕರು ಮನವಿ ಪತ್ರ ನೀಡಿದ್ದಾರೆ. ಮನವಿಯನ್ನು ಸಂಬಂಧಪಟ್ಟವರಿಗೆ ಕಳಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು. ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗದಂತೆ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನಾಗೇಶ್ ನಾಯ್ಕ, ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ https://www.vijayavani.net/peace-comes-from-following-the-message-of-lord-krishna https://www.vijayavani.net/guruprasad-aital-elected-as-president

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net