ಕಿಮ್ಸ್ ಎದುರು ಆಪ್ ಪ್ರತಿಭಟನೆ,  ಸೌಲಭ್ಯ ಕಲ್ಪಿಸಲು ಆಗ್ರಹ

IMG-20241106-WA0017-1.jpg
Published on

ಹುಬ್ಬಳ್ಳಿ: ಇಲ್ಲಿಯ ಕರ್ನಾಟಕ ವೈದ್ಯಕಿಯ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಕಿಮ್ಸ್ ಆಡಳಿತ ಮಂಡಳಿಗೆ ಈಗಾಗಲೇ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಆಡಳಿತ ಭವನದ ಎದುರು ಪ್ರತಿಭಟಿಸಲಾಯಿತು.

ಕಿಮ್ಸ್ ಆಸ್ಪತ್ರೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಆಸ್ಪತ್ರೆ ಆವರಣದಲ್ಲಿರುವ ಕಾನೂನು ಬಾಹಿರ ಮಳಿಗೆ, ಅಂಗಡಿಗಳನ್ನು ತೆರವುಗೊಳಿಸಬೇಕು. ಪಾರ್ಕಿಂಗ್ ವ್ಯವಸ್ಥೆ, ರಸ್ತೆ ಸುಧಾರಣೆ, ಕಾರ್ಮಿಕರ ಸಮಸ್ಯೆ ಬಗೆ ಹರಿಸಬೇಕೆಂದು ಆಗ್ರಹಿಸಲಾಯಿತು.

ಪ್ರತಿಭಟನೆಯಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಸಂಜೀವ ಬೆಳಗೇರಿ, ಜಾಕಿರ್ ರಾಮದುರ್ಗ, ಮಂಜುನಾಥ ಬೆಳಗೇರಿ, ಹುಸೇನ್ಬಾಷಾ ತಳೆವಾಡ, ಬಸವರಾಜ ತೇರದಾಳ, ಎಸ್.ಪಿ. ಹುಬಳೀಕರ್, ಉಷಾ ಸದಾನಂದ ರಾಜುರ, ಮೋಹನ ಬಿಂದ್ಗಿ, ರಾಜು ಅಲ್ಬನ್ನವರ, ಚಂದ್ರು, ಸಾಗರ್ ತಳವಾರ, ಶಿವ ರೆಡ್ಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net