ಕಮಲ್‌ಹಾಸನ್ ವಿರುದ್ಧ ಕರವೇ ಪ್ರತಿಭಟನೆ

28
Published on

ಮೈಸೂರು: ಕನ್ನಡಕ್ಕೆ ಅಪಮಾನ ಮಾಡಿರುವ ನಟ ಕಮಲ್‌ಹಾಸನ್ ಅಭಿಯನದ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ಅವಕಾಶ ನೀಡದಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಯಿತು.

ನಗರದ ಗಾಂಧಿ ಚೌಕದಲ್ಲಿ ಶುಕ್ರವಾರ ಸೇರಿದ ಕಾರ್ಯಕರ್ತರು ನಟ ಕಮಲ್‌ಹಾಸನ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಕನ್ನಡರಿಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಕಮಲ್‌ಹಾಸನ್ ಅವರು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತೆ ತಮಿಳು ಭಾಷೆಯಿಂದ ಕನ್ನಡ ಭಾಷೆಯ ಉಗಮವಾಯಿತು ಎಂಬ ತಪ್ಪು ಮತ್ತು ದುರುದ್ದೇಶಪೂರಿತ ಹೇಳಿಕೆ ನೀಡಿದ್ದಾರೆ. ಈ ಸುಳ್ಳು ಮತ್ತು ಆಧಾರ ರಹಿತ ಹೇಳಿಕೆ ಕನ್ನಡ ಭಾಷೆಯ ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ಸ್ವಾಭಿಮಾನಕ್ಕೆ ಅಘಾತವನ್ನುಂಟು ಮಾಡಿದೆ ಎಂದು ಆಕ್ರೊಶ ವ್ಯಕ್ತಪಡಿಸಿದರು.

ಜೂ.5ರಂದು ಕಮಲ್‌ಹಾಸನ್ ಅವರ ಥಗ್ ಲೈಫ್ ಚಿತ್ರವೂ ಕರ್ನಾಟಕದಲ್ಲಿ ಬಿಡುಗಡೆಯಾಗದಂತೆ ತಡೆಯುವ ನಿರ್ಧಾರವನ್ನು ನಾವು ಕೈಗೊಂಡಿದ್ದೇವೆ. ಹಾಗಾಗಿ ಈ ಚಿತ್ರದ ವಿತರಕರು ವಿತರಣೆ ಮಾಡದೆ ತಮ್ಮ ಹಣ ಹೂಡಿಕೆಯನ್ನು ರಕ್ಷಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್, ಮುಖಂಡರಾದ ಲೋಕೇಶ್, ಸುಜಾತಾ, ಸುನಂದ ಪ್ರಸಾದ್, ರಘು, ಅಸ್ಲಾಂ, ಬಾಲು, ಗಜ, ಮದ್ವೇಶ್, ಶಿವರಾಜ್, ಹೇಮಂತ್‌ಗೌಡ, ಲಾಲು, ದೇಪುರು ವಿಜಯ್, ಮಹೇಶ್, ಮಂಜುನಾಥ್, ಬಾಲರಾಜ್, ಸಂಪತ್ತು, ಸೈಯದ್, ನವೀನ್, ರಾಜೇಂದ್ರ, ಚಂದ್ರಶೇಖರ್, ಪ್ರದೀಪ್, ಮಹದೇವಸ್ವಾಮಿ, ಗುಬ್ಬಿ ಮಹೇಶ್, ರಾಜು, ಶಿವರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net