

ಉಡುಪಿ: ತೆಂಕನಿಡಿಯೂರು ಗ್ರಾಮ ಪಂಚಾಯಿತಿ ಕಸದ ನಿರ್ವಹಣೆಯಲ್ಲಿ ವಿಲವಾಗಿದ್ದು, ಎಸ್ ಎಲ್ ಆರ್ ಎಂ ಘಟಕದಲ್ಲಿ ಮೇಲ್ಮೈಯಲ್ಲಿ ಇಟ್ಟಿದ್ದ ಕಸವನ್ನು ಹೊಂಡ ತೋಡಿ ಹೂತು ಹಾಕಲಾಗಿದ್ದು, ಇದರಿಂದ ಸಮೀಪದಲ್ಲಿರುವ ಕೊಳ ಮತ್ತು ಬೋರ್ವೆಲ್ ನೀರು ಹಾಳಾಗುತ್ತಿದೆ. ಈ ಬಗ್ಗೆ ಗ್ರಾಪಂ ರ್ನಿಲಕ್ಷ$್ಯ ವಹಿಸುತ್ತಿದೆ ಎಂದುಆರೋಪಿಸಿ ಸ್ಥಳಿಯರು ಬುಧವಾರ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದರು.
ಸ್ಥಳಿಯ ನಿವಾಸಿ ಸುಷ್ಮಿತಾ ಮಾತನಾಡಿ, ನಾಲ್ಕು ದಿನಗಳಿಂದ ಕುಡಿಯುವ ನೀರು ಮಾಲಿನ್ಯಗೊಂಡಿದೆ ಎಂದು ಪಂಚಾಯಿತಿಗೆ ತಿಳಿಸಿದ್ದೇವೆ. 50 ಲೋಡುಗಳಷ್ಟು ಕಸವನ್ನು ನೀರಿನ ಟ್ಯಾಂಕ್ ಹತ್ತಿರ ಹೂತಿದ್ದಾರೆ. ಅದರಿಂದ ದುರ್ಗಂಧ ಬರುತ್ತದೆ. ಹೀಗಾಗಿ ಈ ಘಟಕವನ್ನು ಜನವಸತಿ ಇರುವ ಸ್ಥಳದಿಂದ ಬೇರೆಡೆಗೆ ಸ್ಥಳಾಂತರಿಸಬೇಕು. ಆದರೆ ನಮ್ಮ ಬೇಡಿಕೆಗೆ ಗ್ರಾಪಂ ಸ್ಪಂದಿಸುತ್ತಿಲ್ಲ ಎಂದು ಹೇಳಿದರು.
ತೆಂಕಾನಿದಿಯೂರಿನ ಎಸ್ ಎಲ್ ಆರ್ ಎಂ ಘಟಕದಲ್ಲಿದ್ದ ಅಪಾಯಕಾರಿ ರಾಸಾಯನಿಕ ಮತ್ತು ಇತರ ಕಸವನ್ನು ನೆಲದಲ್ಲಿ ಮಣ್ಣಿನಿಂದ ಮುಚ್ಚಿ ಹಾಕಿದೆ. ಮಳೆಯ ಕಾಲದಲ್ಲಿ ಹರಿಯುವ ನೀರು ಹತ್ತಿರದ ನೀರಿನ ಮೂಲಗಳನ್ನು ಮಾಲಿನ್ಯಗೊಳಿಸುತ್ತಿದೆ. ಈ ನೀರನ್ನು ಕುಡಿಯುವುದರಿಂದ ಜನರು ಅನಾರೋಗ್ಯಕ್ಕೀಡಾಗುತ್ತಿದ್ದಾರೆ ಎಂದು ಆರೋಪಿಸಿದರು. ಸ್ಥಳಕ್ಕೆ ಆಗಮಿಸಿದ ತಾಪಂ ಇಒ ವಿಜಯಾ, ಸಮಸ್ಯೆಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಪಂಚಾಯಿತಿ ಸದಸ್ಯರಾದ ವಿನೋದ್ ಸುವರ್ಣ, ನಿಖಿತಾ ಸುರೇಶ್, ಗೀತಾ ಶೆಟ್ಟಿ, ಮಾಲಿನಿ, ಅರುಣ್ ಜತ್ತಣ್ಣ, ಸತೀಶ್ ಪೂಜಾರಿ ಬೈಲಕೆರೆ, ಪ್ರಶಾಂತ್ ಹೆಬ್ಬಾರ್, ಪ್ರದಿಪ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.