ಪಾಲಿಕೆ ಎದುರು ಮುಂದುವರಿದ ಪ್ರತಿಭಟನೆ, ಪೌರಕಾಮಿರ್ಕರಿಂದ ಮಳೆಯಲ್ಲೂ ಅರೆಬೆತ್ತಲೆ ಧರಣಿ

IMG_20230930_130135_209-1.jpg
Published on

ಹುಬ್ಬಳ್ಳಿ: ಸ್ವಚ್ಛತೆ ಹೊರ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆರಂಭಿಸಲಾಗಿರುವ ಗುತ್ತಿಗೆ ಪೌರ ಕಾಮಿರ್ಕರ ಪ್ರತಿಭಟನೆ ಇಲ್ಲಿಯ ಮಹಾನಗರ ಪಾಲಿಕೆ ಕಚೇರಿ ಎದುರು ಶನಿವಾರವೂ ಮುಂದುವರಿಯಿತು.

ಪಾಲಿಕೆ ಎದುರು ಟೆಂಟ್ ಹಾಕಿಕೊಂಡು ಅನಿದಿರ್ಷ್ಟ ಮುಷ್ಕರ ಆರಂಭಿಸಿರುವ ಗುತ್ತಿಗೆ ಪೌರ ಕಾಮಿರ್ಕರು ಶನಿವಾರ ಅರೆಬೆತ್ತಲೆಯಾಗಿ ಕುಳಿತು ಧರಣಿ ನಡೆಸಿದರು.

ರಾಜ್ಯ ಸರ್ಕಾರ 2017ರಲ್ಲಿಯೇ ಗುತ್ತಿಗೆ ಪದ್ಧತಿ ರದ್ದು ಪಡಿಸಿ, ನೇರ ನೇಮಕಾತಿ ಹಾಗೂ ನೇರ ವೇತನ ಪಾವತಿಸಲು ಆದೇಶ ಹೊರಡಿಸಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಕಾನೂನುಬಾಹಿರವಾಗಿ ಹೊರಗುತ್ತಿಗೆ ಪದ್ಧತಿ ಮುಂದುವರಿಸಿದೆ ಎಂದು ಪ್ರತಿಭಟನಾಕಾರರು ದೂರಿದರು.

ಧಾರವಾಡ ಜಿಲ್ಲಾ ಎಸ್ಸಿ ಎಸ್ಟಿ ಪೌರ ಕಾಮಿರ್ಕರ ಮತ್ತು ನೌಕರರ ಸಂದ ಅಧ್ಯಕ್ಷ ವಿಜಯ ಗುಂಟ್ರಾಳ ನೇತೃತ್ವದಲ್ಲಿ ಗುತ್ತಿಗೆ ಪೌರ ಕಾಮಿರ್ಕರು ಪ್ರತಿಭಟನೆ ನಡೆಸಿದರು. ಮಹಾನಗರ ಪಾಲಿಕೆ ವಿರುದ್ಧ ಘೋಷಣೆ ಕೂಗಿದರು.

ಮಹಾನಗರ ಪಾಲಿಕೆ ಸಾಮಾನ್ಯ ಸಭೆ ನಡೆದಿದ್ದು, ಸಭೆಯಲ್ಲಿ ಈ ವಿಷಯ ಚಚಿರ್ಸಿ ಠರಾವ್ ಪಾಸ್ ಮಾಡಬೇಕು. ಪಾಲಿಕೆಯ 799 ಗುತ್ತಿಗೆ ಪೌರ ಕಾಮಿರ್ಕರಿಗೆ ನೇರ ವೇತನ ಪಾವತಿಸಬೇಕು. ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕೆಂದು ಗುಂಟ್ರಾಳ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net