

ಹುಬ್ಬಳ್ಳಿ: ಬ್ಯಾಂಕ್ ಅಧಿಕಾರಿಗಳ ಕಿರುಕುಳದಿಂದ ರೈತ ಮೃತಪಟ್ಟಿದ್ದಾನೆಂದು ಆರೋಪಿಸಿ ಮೃತನ ಕುಟುಂಬಸ್ಥರು ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ಕಿಮ್್ಸ ಶವಾಗಾರದ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
ಸಾಲ ಮರುಪಾವತಿಸುವಂತೆ ಮೊರಬದ ಕೆವಿಜಿ ಬ್ಯಾಂಕ್ನವರು ನೋಟಿಸ್ ನೀಡಿದ್ದರಿಂದ ಮೂರ್ಛೆ ಹೋಗಿ ಅಸ್ವಸ್ಥಗೊಂಡು ಕಿಮ್್ಸ ಆಸ್ಪತ್ರೆ ಸೇರಿದ್ದ ನವಲಗುಂದ ತಾಲೂಕಿನ ಗುಮ್ಮಗೋಳದ ರೈತ ಮಹಾದೇವಪ್ಪ ಜಾವೂರ (75) ಮೃತಪಟ್ಟಿದ್ದಾರೆ. ಇದಕ್ಕೆ ಬ್ಯಾಂಕ್ ಅಧಿಕಾರಿಗಳ ಕಿರುಕುಳ ಕಾರಣ. ಲಕ್ಷಾಂತರ ರೂಪಾಯಿ ವ್ಯಯಿಸಿದರೂ ರೈತ ಬದುಕುಳಿಯಲಿಲ್ಲ. ರೈತನ ಬ್ಯಾಂಕ್ ಸಾಲ ಮನ್ನಾ ಮಾಡಬೇಕು. 25 ಲಕ್ಷ ರೂ. ಪರಿಹಾರ ಕೊಡಬೇಕೆಂದು ಆಗ್ರಹಿಸಿದರು.
ಇದೇ ವೇಳೆ ಮಧ್ಯ ಪ್ರವೇಶಿಸಿದ ಬ್ಯಾಂಕ್ ಅಧಿಕಾರಿಗಳು 5 ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದರು. ಇದಕ್ಕೆ ಒಪ್ಪದ ರೈತರು, ಧಾರವಾಡ ಕೆವಿಜಿ ಬ್ಯಾಂಕ್ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ತಕ್ಷಣ ಉಪವಿಭಾಗಾಧಿಕಾರಿ, ಕೃಷಿ, ಪೊಲೀಸ್ ಅಧಿಕಾರಿಗಳು ಮತ್ತು ಬ್ಯಾಂಕ್ ಸಿಬ್ಬಂದಿ ಜಂಟಿ ಸಭೆ ನಡೆಸಿದರು. ಬ್ಯಾಂಕ್ನ ಉನ್ನತ ಅಧಿಕಾರಿಗಳೊಂದಿಗೆ ರ್ಚಚಿಸಿ ಮೃತ ರೈತನ ಸಾಲ ಮನ್ನಾ ಮಾಡಲಾಗುವುದು ಎಂದು ಲಿಖಿತ ರೂಪದಲ್ಲಿ ಬರೆದು ಭರವಸೆ ಕೊಟ್ಟ ನಂತರ ಪ್ರತಿಭಟನೆ ಕೈಬಿಡಲಾಗಿದೆ ಎಂದು ಹಸಿರು ಸೇನೆ ಜಿಲ್ಲಾಧ್ಯಕ್ಷ ರವಿರಾಜ ಕಂಬಳಿ ತಿಳಿಸಿದರು.
ಪ್ರತಿಭಟನೆಯಲ್ಲಿ ಬಸಪ್ಪ ಬೆಳ್ಳಿಗಟ್ಟಿ, ಲಕ್ಷ್ಮೀ ದೊಡ್ಡಮನಿ, ಮಹಾದೇವಪ್ಪ ಪಾಟೀಲ, ಅಶೋಕ ನಿಲಗುಂದ, ಶಂಕ್ರಪ್ಪ ತಿಪ್ಪಣ್ಣವರ ಇತರರು ಇದ್ದರು.