ಮಳಿಗೆಗಳ ತೆರವು ವಿರೋಧಿಸಿ ಪ್ರತಿಭಟನೆ

Published on

ಬಳ್ಳಾರಿ ; ಇಲ್ಲಿನ ಬೆಂಗಳೂರು ರಸ್ತೆಯಲ್ಲಿನ ಎಂಟು ವಾಣಿಜ್ಯ ಮಳಿಗೆಗಳ ತೆರವು ವಿರೋಧಿಸಿ ಜಿಲ್ಲಾ ಬಿಜೆಪಿ ಘಟಕದಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.

ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಮಾತನಾಡಿ, ಕಳೆದ 2018ರಲ್ಲಿ ಮಳಿಗೆಗಳ ಗುತ್ತಿಗೆ ಪೂರ್ಣಗೊಂಡಿದೆ. ಆದರೆ, ಮಳಿಗೆಗಳ ಮಾಲೀಕರು ಮಾತ್ರ ಪ್ರತಿ ತಿಂಗಳು ಪಾಲಿಕೆಗೆ ಬಾಡಿಗೆ ಪಾವತಿಸುತ್ತಿದ್ದಾರೆ. ಮರು ಗುತ್ತಿಗೆ ಪಡೆಯಲು ಅರ್ಜಿ ಸಲ್ಲಿಸಿದ್ದು ಪಾಲಿಕೆಯಿಂದ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೆ, ಏಕಾಏಕಿ ಒಂದು ನೋಟಿಸ್ ನೀಡದೆ ತೆರವುಗೆ ಮುಂದಾಗಿರುವುದು ಆಶ್ಚರ್ಯ ಮೂಡಿಸಿದೆ. ತೆರವುಗೆ ಮುಂದಾಗಿರುವುದರ ವಿಷಯದ ಬಗ್ಗೆ ಪಾಲಿಕೆಯ ಆಯುಕ್ತ ಹಾಗೂ ಮೇಯರ್ ತಿಳಿದಿಲ್ಲ. ಡೆಮಾಲಿಶ್ ಮಾಡಲು ಬಂದಿರುವ ಒಬ್ಬರು ಕೂಡ ಪಾಲಿಕೆಯ ಸಿಬ್ಬಂದಿಯೇ ಅಲ್ಲ. ಆದ್ದರಿಂದ, ನಗರದಲ್ಲಿ ಇಂತಹ ದೌರ್ಜನ್ಯ ನಡೆಯಲು ಬಿಡುವುದಿಲ್ಲ. ಪಾಲಿಕೆಯ ಆಸ್ತಿಯನ್ನೇ ಆಳುವವರು ರಕ್ಷಿಸಿಕೊಳ್ಳದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಈ ಸ್ಥಳದಲ್ಲಿ ಮಳಿಗೆಗಳ ಬೃಹತ್ ಮಾಲ್ ನಿರ್ಮಿಸಲು ಮೊದಲು ಯೋಜನೆ ರೂಪಿಸಿ, ಅನುದಾನ ತಂದು, ಟೆಂಡರ್ ಕರೆದು ಸದ್ಯ ಇರುವ ಮಳಿಗೆಗಳ ಮಾಲೀಕರಿಗೆ ಮೀಸಲು ಮಾಡಿದ ನಂತರ ಡೆಮಾಲಿಶ್‌ಗೊಳಿಸಲಿ. ಅದು ಬಿಟ್ಟು ರಾತ್ರೋರಾತ್ರಿ ಕಳ್ಳತನದಿಂದ ತೆರವು ಮುಂದಾಗುವುದು ಸರಿಯಲ್ಲಿ ಎಂದು ಹೇಳಿದರು. ಬಳಿಕ ಪ್ರತಿಭಟನೆ ಸ್ಥಳಕ್ಕೆ ಮಾಜಿ ಸಚಿವ ಬಿ.ಶ್ರೀರಾಮುಲು ಆಗಮಿಸಿ ಸರ್ಕಾರ ಹಾಗೂ ಪಾಲಿಕೆ ವಿರುದ್ಧ ಧರಣಿ ಆರಂಭಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net