ಪರಿಸರ ಮಾಲಿನ್ಯ ಖಂಡಿಸಿ ಪ್ರತಿಭಟನೆ : ಖಾಸಗಿ ಕಂಪನಿಯಿಂದ ಅಸಮರ್ಪಕ ತ್ಯಾಜ್ಯ ವಿಲೇವಾರಿ

prathibhatane
ನಂದಿಕೂರು ಎಂ11 ಕೈಗಾರಿಕಾ ಘಟಕ ಮಾಲಿನ್ಯ ಖಂಡಿಸಿ ಸ್ಥಳೀಯರು ತಹಸೀಲ್ದಾರ್ ಪ್ರತಿಭಾ ಆರ್.ಗೆ ಮನವಿ ಸಲ್ಲಿಸಿದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಲಾಲಾಜಿ ಆರ್.ಮೆಂಡನ್, ದಿನೇಶ್ ಪಲಿಮಾರು, ಸೌಮ್ಯಲತಾ ಶೆಟ್ಟಿ, ಶಶಿಕಲಾ ವೈ, ಪ್ರಕಾಶ್ ಶೆಟ್ಟಿ ಮತ್ತಿತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ನಂದಿಕೂರು ಎಂ11ಬಯೋ ಡಿಸೇಲ್ ಹಾಗೂ ಪಾಮ್ ಆಯಿಲ್ ಉತ್ಪಾದನಾ ಘಟಕದಿಂದ ಉಂಟಾಗುತ್ತಿರುವ ಮಾಲಿನ್ಯ ಖಂಡಿಸಿ ಕಂಪನಿ ವಿರುದ್ಧ ಗ್ರಾಮಸ್ಥರು ಮಂಗಳವಾರ ಪ್ರತಿಭಟಿಸಿದರು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕಂಪನಿಯಿಂದ ನಿತ್ಯವೂ ಮಾಲಿನ್ಯ ಉಂಟಾಗುತ್ತಿರುವ ದೂರುಗಳು ಸ್ಥಳೀಯರಿಂದ ಕೇಳಿಬರುತ್ತಿದೆ. ಸರೋಜಿನಿ ಮಹಿಷಿ ವರದಿಯಂತೆ ಡಿಗ್ರೇಡ್ ಶೇ.100, ಸಿ ಗ್ರೇಡ್‌ನಲ್ಲಿ ಶೇ.80 ಉದ್ಯೋಗ ಸ್ಥಳೀಯರಿಗೆ ನೀಡಲೇಬೇಕು ಎಂದು ಒತ್ತಾಯಿಸಿದರು. ಮುಖಂಡ ಮುನೀರ್ ಕಾಟಿಪಳ್ಳ ಮಾತನಾಡಿದರು.

ಫಲಿಮಾರು ಅಡ್ವೆ, ನಂದಿಕೂರಿನಲ್ಲಿ ಅಂಗಡಿಮುಗ್ಗಟ್ಟು ಭಾಗದಲ್ಲಿ ಪ್ರತಿಭಟನೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಈಗಾಗಲೇ ತಹಸೀಲ್ದಾರ್‌ಗೆ ಈ ಕುರಿತು ಮನವಿ ಮಾಡಲಾಗಿದ್ದು, ಎಂ11ಇಂಡಸ್ಟ್ರಿಯಿಂದ ಹೊರಬರುವ ಮಾಲಿನ್ಯ ಕುಡಿಯುವ ನೀರಿನಲ್ಲಿ ಸೇರಿಕೊಂಡು ಜನರ ಆರೋಗ್ಯದಲ್ಲಿ ಭಾರಿ ತೊಂದರೆಗೆ ಕಾರಣವಾಗಿದೆ. ಕಂಪನಿಗೆ ಈಗಾಗಲೇ ಮೂರು ಬಾರಿ ನೋಟಿಸು ನೀಡಲಾಗಿದ್ದು, ಏಳು ದಿನಗಳ ಒಳಗೆ ಉತ್ತರಿಸುವಂತೆ ಸೂಚನೆ ನೀಡಿರುವದಾಗಿ ತಹಸೀಲ್ದಾರರು ತಿಳಿಸಿದ್ದಾರೆ.

ಕಂದಾಯ ನಿರೀಕ್ಷಕ ಇಜಾಜ್ ಸಾಬಿರ್, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್,ಪ್ರಮುಖರಾದ ರಾಧೇಶ್ ಮೋಹನ್‌ದಾಸ್ ಭಟ್ ಮೂಲ್ಕಿ, ಶ್ರೀಕುಮಾರ್, ರವೀಂದ್ರನಾಥ್ ಶಾನುಭೋಗ್, ಪ್ರೇಮಾನಂದ ಕಲ್ಮಾಡಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಸೌಮ್ಯಲತಾ ಶೆಟ್ಟಿ, ರಾಯೇಶ್ವರ ಪೈ, ಶಶಿಕಲಾ ವೈ, ಶೇಖರ್ ಹೆಜ್ಮಾಡಿ, ದೀಪಕ್ ಕೋಟ್ಯಾನ್, ವಿಷ್ಣುಮೂರ್ತಿ ಪಾದೆಬೆಟ್ಟು, ಲಕ್ಷ್ಮಣ್ ಎಲ್. ಶೆಟ್ಟಿ, ನಾಗೇಶ್ ರಾವ್, ದಿನೇಶ್ ಫಲಿಮಾರು, ಶಶಿಕಾಂತ್ ಪಡುಬಿದ್ರಿ, ಉಮನಾಥ್ ಪಡುಬಿದ್ರಿ, ದೀಪಕ್ ಕಾಮತ್ ಕಾಂಜರಕಟ್ಟೆ ಉಪಸ್ಥಿತರಿದ್ದರು.

ಈಗಾಗಲೇ ಕಂಪನಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದು, ಶೂನ್ಯ ಮಾಲಿನ್ಯದ ಕುರಿತು ಕಂಪನಿ ಮಾಲಿಕರಿಗೆ ಸೂಚನೆ ನೀಡಲಾಗಿದೆ. ಮತ್ತೊಮ್ಮೆ ಪರಿಸರ ಮಾಲಿನ್ಯ ಉಂಟಾದರೆ ಕ್ರಮಕೈಗೊಳ್ಳಲಾಗುತ್ತದೆ. ಜನರ ಬೇಡಿಕೆಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು.-ಪ್ರತಿಭಾ ಆರ್, ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net