ವಿದ್ಯುತ್ ದರ ದರ ಏರಿಕೆ ಖಂಡಿಸಿ ಪ್ರತಿಭಟನೆ

22 NRD-POWER
ವಿದ್ಯುತ್ ಬೆಲೆ ಏರಿಕೆ ಖಂಡಿಸಿ ನರಗುಂದ ತಾಲೂಕು ವಾಣಿಜ್ಯೋದ್ಯಮಿಗಳ ಸಂಘದ ಸದಸ್ಯರು ತಹಸೀಲ್ದಾರ್ ಎ.ಡಿ. ಅಮರಾವದಗಿ ಅವರಿಗೆ ಮನವಿ ಸಲ್ಲಿಸಿದರು.
Published on

ನರಗುಂದ: ವಿದ್ಯುತ್ ದರ ಏರಿಕೆ ಖಂಡಿಸಿ ಪಟ್ಟಣದಲ್ಲಿ ಗುರುವಾರ ತಾಲೂಕು ವಾಣಿಜ್ಯೋದ್ಯಮಿಗಳ ಸಂಘದ ಸದಸ್ಯರು ತಮ್ಮ ಎಪಿಎಂಸಿ ವ್ಯಾಪಾರ ವಹಿವಾಟು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಕೂಡಲೇ ದರ ಏರಿಕೆ ಹಿಂಪಡೆಯುವಂತೆ ತಹಸೀಲ್ದಾರ್ ಎ.ಡಿ. ಅಮರಾವದಗಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನರಗುಂದ ವಾಣಿಜ್ಯೋದ್ಯಮಿಗಳ ಸಂಘದ ಮುಖಂಡರು, ಹೆಸ್ಕಾಂನಿಂದ ವಿದ್ಯುತ್ ದರ ಏರಿಕೆ ಮಾಡಿದ್ದು ಖಂಡನೀಯ. ವಿದ್ಯುತ್ ದರ ಹೆಚ್ಚಳ ಸಣ್ಣ ಕೈಗಾರಿಕೆ ಮತ್ತು ವ್ಯವಹಾರಕ್ಕೆ ಪೆಟ್ಟು ನೀಡಲಿದೆ. ಸರ್ಕಾರ ದರ ಏರಿಕೆಯನ್ನು ಪುನರ್ ಪರಿಶೀಲಿಸಬೇಕು. ಈಗಾಗಲೇ ವಿದ್ಯುತ್ ದರ ಏರಿಕೆ ಹಿಂಪಡೆಯುವಂತೆ ಹೆಸ್ಕಾಂ ಮತ್ತು ಡಿಸಿ ಅಧಿಕಾರಿಗಳನ್ನು ಸಂಪರ್ಕಿಸಿ ಮನವಿ ಸಲ್ಲಿಸಿದ್ದೇವೆ ಎಂದರು.

ನರಗುಂದ ವಾಣಿಜ್ಯೋದ್ಯಮಿಗಳ ಸಂಘದ ಕಾರ್ಯದರ್ಶಿ ವಿಜಯ ಮಾದನೂರ, ಸುರೇಶ ಚೋಪ್ರಾ, ಬಸಣ್ಣ ಶೆಟ್ಟಿಕೇರಿ, ವೆಂಕಟೇಶ ಗುಡಿಸಾಗರ, ಮುತ್ತು ವಡ್ಡಿಗೇರಿ, ಸತೀಶ ಗುಡಿಸಾಗರ, ಜಯಪ್ರಕಾಶ ಕಂಠಿ, ಈರಣ್ಣ ವಾಳದ, ವಿನಯ ಗೋವೇಶ್ವರ, ಚೇತನ ಅಸೂಟಿ, ಯೋಗೇಶ ಸಂಗನಗೌಡರ, ಗಿರೀಶ ವಡ್ಡಿಗೇರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net