ಪರಿಹಾರ ವಿತರಣೆ ತಾರತಮ್ಯ ವಿರೋಧಿಸಿ ಪ್ರತಿಭಟನೆ

Protest against compensation distribution discrimination
Published on

ಬ್ಯಾಡಗಿ: ಎನ್‌ಡಿಆರ್‌ಎಫ್ ಹಾಗೂ ಆರ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪರಿಹಾರ ವಿತರಣೆಗೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಪಟ್ಟಣದ ತಹಸೀಲ್ದಾರ್ ಕಾರ್ಯಾಲಯ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಹಾವೇರಿ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಎರಡು ತಿಂಗಳ ಹಿಂದೆ ರಾಜ್ಯ ಸರ್ಕಾರ ಕೇವಲ 2 ಸಾ.ರೂ.ನೀಡಿ ಕೈತೊಳೆದುಕೊಂಡಿದೆ. ಕೇಂದ್ರದ 8500 ಸಾ.ರೂ. ಪೈಕಿ 2 ಸಾವಿರ ರೂ.ಗಳ್ನುಕಡಿತಗೊಳಿಸಲಾಗಿದೆ. ಕೆಲ ರೈತರಿಗೆ ಎಕರೆಗೆ 1200, 1500 ಜಮೆಯಾಗಿವೆ. ಪರಿಹಾರ ವಿತರಣೆಗೆ ಯಾವ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ ಎಂದು ಪ್ರಶ್ನಿಸಿದರು.

ತಾಲೂಕಾಧ್ಯಕ್ಷ ರುದ್ರಗೌಡ್ರ ಕಾಡನಗೌಡ್ರ, ಎರಡು ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರಿಗೆ ಹಾವೇರಿಯಲ್ಲಿ ರೈತರು ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಮುಖ್ಯಮಂತ್ರಿಗಳು ರೈತರಿಂದ ಅರ್ಜಿ ಬಂದಿಲ್ಲವೆಂದು ಉತ್ತರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತಸಂಘದ ಪದಾಧಿಕಾರಿಗಳಾದ ಕಿರಣ ಗಡಿಗೋಳ, ಗಂಗಣ್ಣ ಎಲಿ, ಮಂಜು ತೋಟದ, ಮಲ್ಲೇಶಪ್ಪ ಡಂಬಳ, ಶಿವರುದ್ರಪ್ಪ ಮೂಡೇರ, ಪ್ರಕಾಶ ಸಿದ್ದಮ್ಮನವರ, ಮೌನೇಶ ಕಮ್ಮಾರ,ಕೆ.ವಿ.ದೊಡ್ಡಗೌಡ್ರ, ಶಂಕರ ಮರಗಾಲ, ಶಿವಪ್ಪ ಮತ್ತೂರು, ನಿಂಗಪ್ಪ ಹೆಗ್ಗಣ್ಣನವರ, ಜಾನ್ ಪುನೀತ್, ಫಕೀರೇಶ ಅಜಗೊಂಡ್ರ, ನಾಗಪ್ಪ ಸಣ್ಣಪ್ಪನವರ, ಸಂಜೀವ ಬಿಷ್ಟಣ್ಣನವರ ಇದ್ದರು.

ಅರ್ಜಿ ಸಲ್ಲಿಸಿದ ರೈತರು: ಬೆಳೆ ಪರಿಹಾರ ವಿತರಣೆಯಲ್ಲಿ ಆಗಿರುವ ಅನ್ಯಾಯ ಸರಿಪಡಿಸುವಂತೆ ತಾಲೂಕಿನ ಸಾವಿರಾರು ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪಹಣಿ ಪತ್ರ, ಆಧಾರ, ಬ್ಯಾಂಕ ಖಾತೆಯೊಂದಿಗೆ ಅರ್ಜಿ ಸಲ್ಲಿಸಿದರು. ಇದಕ್ಕಾಗಿ ತಹಸೀಲ್ದಾರ್ ಕಾರ್ಯಾಲಯದ ಮುಂಭಾಗದಲ್ಲಿ ಎಂಟು ಕೌಂಟರ್‌ಗಳನ್ನು ತೆರೆಯಲಾಗಿತ್ತು. ಎಲ್ಲ ಸಿಬ್ಬಂದಿ ರೈತರಿಂದ ಅರ್ಜಿ ಪಡೆದು ಸ್ವೀಕೃತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net