ಬ್ಯಾಂಕ್ ವಿರುದ್ಧ ಧರಣಿ ವಾಪಸ್ : ಬೇಡಿಕೆ ಈಡೇರಿಸುವ ಆಶ್ವಾಸನೆ ಕೊಟ್ಟ ಅಧಿಕಾರಿಗಳು

bank
Published on

ವಿಜಯವಾಣಿ ಸುದ್ದಿಜಾಲ ಕೊಕ್ಕಡ

ಕೊಕ್ಕಡದ ಕೇಂದ್ರ ಭಾಗದಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ಗ್ರಾಹಕರಿಗೆ ಆಗುತ್ತಿರುವ ತೊಂದರೆಗಳ ವಿರುದ್ಧ ಸೋಮವಾರ ಬ್ಯಾಂಕ್ ಎದುರು ಕೆನರಾ ಬ್ಯಾಂಕ್ ದೌರ್ಜನ್ಯ ವಿರೋಧಿ ಸಮಿತಿ ನೇತೃತ್ವದಲ್ಲಿ ಧರಣಿ ನಡೆಸಲಾಯಿತು. ಸಂಜೆ 7 ಗಂಟೆ ವೇಳೆಗೆ ಬ್ಯಾಂಕ್ ಅಧಿಕಾರಿಗಳು ಮತ್ತು ಮೇಲಧಿಕಾರಿಗಳು ಕೊಟ್ಟ ಭರವಸೆ ಮೇರೆಗೆ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.

ಬ್ಯಾಂಕಿನಲ್ಲಿ ಸುಮಾರು 20 ವರ್ಷ ಸರಾಫರಾಗಿ ಕರ್ತವ್ಯ ನಿರ್ವಹಿಸಿದ್ದ ಪದ್ಮನಾಭ ಆಚಾರ್ಯರನ್ನು ವಜಾ ಕ್ರಮವನ್ನು ಹಿಂಪಡೆಯಬೇಕು ಇಲ್ಲವೇ ತನಿಖೆ ನಡೆಸಿ ಅವರ ತಪ್ಪನ್ನು ಸಾಬೀತುಪಡಿೇಡಿಕೆಗೆ ದೂರವಾಣಿ ಮೂಲಕ ಹೋರಾಟಗಾರರನ್ನು ಸಂಪರ್ಕಿಸಿದ ಲೀಡ್ ಬ್ಯಾಂಕ್ ಅಧಿಕಾರಿ ಕವಿತಾ ಎನ್ ಶೆಟ್ಟಿ ತನಿಖೆ ನಡೆಸಿ ನ್ಯಾಯ ಒದಗಿಸುವ ಭರವಸೆ ಕೊಟ್ಟರು.

ಒಟಿಪಿ ಮೂಲಕ ಹಲವು ಗ್ರಾಹಕರ ಖಾತೆಗಳ ಲಕ್ಷಾಂತರ ಹಣ ಲಪಟಾಯಿಸಿರುವ ಬಗ್ಗೆಯೂ ಕ್ರಮಕೈಗೊಳ್ಳುವುದಾಗಿ ಲೀಡ್ ಬ್ಯಾಂಕ್ ಅಧಿಕಾರಿ ತಿಳಿಸಿದರು. ಅನಕ್ಷರಸ್ಥ, ಅಸಹಾಯಕ ಗ್ರಾಹಕರು ಬಂದಾಗ ಬರೆದು ಕೊಡಲು ಒತ್ತಾಯಿಸದೆ ಬ್ಯಾಂಕ್‌ನಿಂದಲೇ ಬರೆದು ಕೊಡುವ ವ್ಯವಸ್ಥೆ ಮಾಡುವುದಾಗಿ ಬ್ಯಾಂಕ್ ಅಧಿಕಾರಿಗಳು ತಿಳಿಸಿದರು. ಹಲವರ ಖಾತೆಯಿಂದ ಹಣ ಕಟ್ ಆಗುತ್ತಿರುವುದರ ಬಗ್ಗೆ ಸರಿಯಾಗಿ ಪರಿಶೀಲಿಸಿ ಮನದಟ್ಟು ಮಾಡಿಕೊಡುವುದಾಗಿ ಒಪ್ಪಿದರು. ಹಿಂದಿ ಭಾಷಿಕರಿಂದಾಗಿ ಮುಂದೆ ಗ್ರಾಹಕರಿಗೆ ಸಮಸ್ಯೆ ಆಗದಂತೆ ಕ್ರಮವಹಿಸುವುದಾಗಿ ತಿಳಿಸಿದರು.

ಬೆಳ್ತಂಗಡಿಯ ವಕೀಲ ಬಿ. ಎಂ. ಭಟ್, ಪ್ರಮುಖರಾದ ಡಾ. ಗಣೇಶ್ ಪ್ರಸಾದ್, ಶೀನ ನಾಯ್ಕ, ತುಕ್ರಪ್ಪ ಶೆಟ್ಟಿ ನೂಜೆ, ಶ್ಯಾಮರಾಜ್ ಪಟ್ರಮೆ, ಇಸ್ಮಾಯಿಲ್, ಶ್ರೀಧರ ಗೌಡ, ಜೇಸುದಾಸ್, ಸತ್ಯದಾಸ್, ಫಾರೂಕ್ ಮಡೆಂಜೋಡಿ, ಪ್ರಶಾಂತ ರೈ, ಶ್ರೀಧರ ರಾವ್ ಕಾಯಡ ಮತ್ತಿತರರು ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net